ಶೂ ಧರಿಸಿ ತಲುಪಿದ ಪ್ಲಸ್ ವನ್ ವಿದ್ಯಾರ್ಥಿಗೆ ಗಂಭೀರ ಹಲ್ಲೆ: ಪ್ಲಸ್‌ಟು ವಿದ್ಯಾರ್ಥಿಗಳಾದ 6 ಮಂದಿ ವಿರುದ್ಧ ರ‍್ಯಾಗಿಂಗ್ ಕಾಯ್ದೆ ಪ್ರಕಾರ ಕೇಸು

ಮುಳ್ಳೇರಿಯ: ಆದೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಶೂ ಧರಿಸಿ ತಲುಪಿದ ಪ್ಲಸ್ ವನ್ ವಿದ್ಯಾರ್ಥಿಗೆ ಗಂಭೀರ ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಪ್ಲಸ್ ಟು ವಿದ್ಯಾರ್ಥಿಗಳಾದ 6 ಮಂದಿ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ರ‍್ಯಾಗಿಂಗ್ ವಿರುದ್ಧ ಕಾಯ್ದೆಗಳ ಪ್ರಕಾರ ಕೇಸು ದಾಖಲಿಸಲಾಗಿದೆ. ಜೂನ್ 20ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ತರಗತಿ ಕೊಠಡಿ ಹಾಗೂ ಬಸ್‌ಸ್ಟಾಪ್ ಪರಿಸರದಲ್ಲಿ  ಹಲ್ಲೆ ನಡೆದಿದ್ದು ಈ ಕುರಿತು ಪ್ಲಸ್ ವನ್ ವಿದ್ಯಾರ್ಥಿ ಭಯದಿಂದ ಯಾರಲ್ಲೂ ಹೇಳಿರಲಿಲ್ಲ. ಆದರೆ ಎರಡು ದಿನಗಳ ಬಳಿಕ ಕುತ್ತಿಗೆ  ನೋವು ಅನುಭವಗೊಂಡ ಈತ ವಿಷಯವನ್ನು  ಇತರರಲ್ಲಿ ತಿಳಿಸಿದ್ದಾನೆ. ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಪ್ರಾಂಶುಪಾಲ ಹಾಗೂ ಆದೂರು ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರ ನಿರ್ದೇಶದಂತೆ ಶಾಲೆಯಲ್ಲಿ ಆಂಟಿ ರ‍್ಯಾಗಿಂಗ್ ಕಮಿಟಿ ಈ ಕುರಿತು ತನಿಖೆ ನಡೆಸಿದೆ. ಶೂ ಧರಿಸಿ ತರಗತಿಗೆ ತಲುಪಿದ ದ್ವೇಷದಿಂದ ಪ್ಲಸ್‌ವನ್ ವಿದ್ಯಾರ್ಥಿಯನ್ನು ರ‍್ಯಾಗಿಂಗ್‌ಗೊಳಪಡಿಸಿರುವುದಾಗಿ ಕಮಿಟಿ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಂಟಿ ರ‍್ಯಾಗಿಂಗ್ ಕಾಯ್ದೆ ಸೇರಿಸಿ ಪ್ಲಸ್ ಟು ವಿದ್ಯಾರ್ಥಿಗಳಾದ ೬ ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಇದೇ ರೀತಿಯ ಮತ್ತೊಂದು ಘಟನೆಯಲ್ಲಿ ಆದೂರು ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ರ‍್ಯಾಗಿಂಗ್ ವಿರುದ್ಧ ಕಾಯ್ದೆ ಕೂಡಾ ಸೇರಿಸಲಾಗಿದೆ. ಶೂ ಧರಿಸಿ ತರಗತಿಗೆ ತಲುಪಿದ ವಿದ್ಯಾರ್ಥಿಯನ್ನು ಹಲ್ಲೆಗೈದು ಆತನ ದೇಹದ ಮೇಲೆ ಬೆಂಚ್ ಇರಿಸಿದ ಪರಿಣಾಮ ಕೈಯ ಎಲುಬು ಮುರಿದಿರುವುದಾಗಿ ಕೇಸಿನಲ್ಲಿ ತಿಳಿಸಲಾಗಿದೆ. ಎರಡೂ ಕೇಸುಗಳಲ್ಲೂ ಆರೋಪಿಗಳಾದ ೯ ಮಂದಿ ಪ್ಲಸ್ ಟು ವಿದ್ಯಾರ್ಥಿಗಳನ್ನು ಶಾಲಾ ಅಧಿಕಾರಿಗಳು ತರಗತಿಯಿಂದ ಅಮಾನತು ಗೊಳಿಸಿದ್ದಾರೆ.

RELATED NEWS

You cannot copy contents of this page