ರಾಷ್ಟ್ರೀಯ ಹೆದ್ದಾರಿ-66: ತಲಪಾಡಿ-ಚೆಂಗಳ ರೀಚ್ನ ಉದ್ಘಾಟನೆ ಮುಂದಿನ ತಿಂಗಳು
ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66 ಅಭಿವೃದ್ಧಿ ಯೋಜನೆಯಂತೆ ತಲಪಾಡಿಯಿಂದ ಆರಂಭಗೊಂಡು ಚೆಂಗಳ ತನಕದ ನಿರ್ಮಾಣ ಕೆಲಸವನ್ನು ಮುಂದಿನ ತಿಂಗಳ ೧೫ರೊಳಗೆ ಪೂರ್ಣ ಗೊಳಿಸಿ ಬಳಿಕ ಅದರ ಉದ್ಘಾಟನಾ ಕ್ರಮ ನೆರವೇರಿಸಿ ಅದನ್ನು ಪೂರ್ಣರೂಪದಲ್ಲಿ ಸಾರಿಗೆ ಸಂಚಾರಕ್ಕೆ ಬಿಟ್ಟುಕೊಡಲಾಗು ವುದು. ಇದರ ಪೂರ್ವಭಾವಿಯಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಜ್ಞರ ತಂಡ ಈ ರೀಚ್ನ ನಿರ್ಮಾಣ ಕೆಲಸಗಳನ್ನು ಈಗಾಗಲೇ ಪರಿಶೀಲಿಸಿದೆ. ಇದರಂತೆ ತಲಪಾಡಿಯಿಂದ ಚೆಂಗಳ ತನಕದ 39 ಕಿಲೋ ಮೀಟರ್ ರೀಚ್ ನ್ನು ಮುಂದಿನ ತಿಂಗಳು ಪೂರ್ಣವಾಗಿ ಸಾರಿಗೆ ಸಂಚಾರಕ್ಕೆ ತೆರೆದುಕೊಡುವ ತೀರ್ಮಾನಕ್ಕೆ ಬರಲಾಗಿದೆ.
ಊರಾಳುಂಗಲ್ ಲೇಬರ್ ಕಾಂಟ್ರಾಕ್ಟ್ ಕೋ-ಆಪರೇಟಿವ್ ಸೊಸೈಟಿ ಈ ರೀಚ್ನ ನಿರ್ಮಾಣ ಕೆಲಸದ ಗುತ್ತಿಗೆ ವಹಿಸಿಕೊಂಡಿದೆ. ಇದರ ಹೊರತಾಗಿ ವಂಙಳಂ-ರಾಮನಾಟ್ಟುಂ ಗರ (ಕಲ್ಲಿಕೋಟೆ ಬೈಪಾಸ್-28.4 ಕಿ.ಮೀ) ಮತ್ತು ವಳಾಂಚೇರಿ-ಕಾಪಿರಿಕ್ಕಾಡ್ (37.35 ಕಿ.ಮೀ) ರೀಚ್ನ ಕೆಲಸಗಳನ್ನು ಮುಂದಿನ ತಿಂಗಳಲ್ಲೇ ಪೂರ್ತೀಕರಿಸಿ ಅವುಗಳನ್ನೂ ಪೂರ್ಣ ರೂಪದಲ್ಲಿ ಸಾರಿಗೆ ಸಂಚಾರಕ್ಕೆ ತೆರೆದುಕೊಡುವ ತೀರ್ಮಾನವನ್ನೂ ಕೈಗೊಳ್ಳಲಾಗಿದೆ. ಈ ಮೂರು ರೀಚ್ಗಳ ನಿರ್ಮಾಣ ಕೆಲಸಗಳನ್ನು ಮೇ 31ರೊಳಗಾಗಿ ಪೂರ್ತೀಕರಿಸಲು ಈ ಹಿಂದೆ ತೀರ್ಮಾನಿಸಲಾ ಗಿತ್ತು. ಆದರೆ ನಂತರ ಅದನ್ನು ಮುಂದಿನ ತಿಂಗಳೊಳಗಾಗಿ ಪೂರ್ತೀಕರಿಸುವ ತೀರ್ಮಾನಕ್ಕೆ ಬರಲಾಗಿದೆ. ದ್ವಿಚಕ್ರ ವಾಹನ ಮತ್ತು ಆಟೋ ರಿಕ್ಷಾಗಳು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗಳಲ್ಲಿ ಮಾತ್ರವೇ ಸೇವೆ ನಡೆಸಬೇಕು. ಇನ್ನು ಸರ್ವೀಸ್ ರಸ್ತೆಗಳಿಲ್ಲದ ದೊಡ್ಡ ಸೇತುವೆಗಳಲ್ಲಿ ಮಾತ್ರವೇ ಆಟೋ ರಿಕ್ಷಾ ಮತ್ತು ದ್ವಿಚಕ್ರ ವಾಹನಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇವೆ ನಡೆಸುವಲ್ಲಿ ರಿಯಾಯಿತಿ ನೀಡಲಾಗಿದೆ. ತಲಪಾಡಿ ಯಿಂದ ತಿರುವನಂ ತಪುರ ತನಕದ 644 ಕಿ.ಮೀ. ತನಕದ ರಾಷ್ಟ್ರೀಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ 66 ಆಗಿ ಅಭಿವೃದ್ಧಿಗೊಳಿಸಲಾಗುತ್ತದೆ. ಒಟ್ಟು 22 ರೀಚ್ಗಳಲ್ಲಾಗಿ ಇದರ ನಿರ್ಮಾಣ ಕೆಲಸ ನಡೆಯು ತ್ತಿದ್ದು, ಇದರಲ್ಲಿ ೧೭ ರೀಚ್ಗಳ ನಿರ್ಮಾ ಣ ಕೆಲಸಗಳು ಪೂರ್ಣಗೊಳ್ಳಲು ಇನ್ನೂ ಬಾಕಿ ಉಳಿದುಕೊಂಡಿದೆ.