ಕುಂಬಳೆ ಪಂ. ಕಚೇರಿಗೆ ನಾಳೆ ಸಿಪಿಎಂ ಮಾರ್ಚ್
ಕುಂಬಳೆ: ಕುಂಬಳೆ ಪಂ.ನಲ್ಲಿ ಆಡಳಿತ ಪಕ್ಷದ ನೇತೃತ್ವದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರುದ್ಧ ಬೃಹತ್ ಹೋರಾಟ ನಡೆಸುವುದಾಗಿ ಸಿಪಿಎಂ ಕುಂಬಳೆ ಪಂಚಾಯತ್ ಸಮಿತಿ ತಿಳಿಸಿದೆ. ಪಂಚಾಯತ್ನಲ್ಲಿ ನಡೆದಿರುವ ಭ್ರಷ್ಟಾಚಾರಗಳ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ನಾಳೆ ಪಂಚಾಯತ್ ಕಚೇರಿಗೆ ಸಿಪಿಎಂ ಮಾರ್ಚ್ ನಡೆಸಲಿದೆ. ನಾಳೆ ಬೆಳಿಗ್ಗೆ 10 ಗಂಟೆಗೆ ಬದಿಯಡ್ಕ ಅನಿಲ್ ಕುಂಬಳೆ ರಸ್ತೆಯಿಂದ ಮಾರ್ಚ್ ಆರಂಭಿ ಸುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.