ಬದಿಯಡ್ಕ: ಅಗಲ್ಪಾಡಿ ಎಸ್‌ಎಪಿ ಹೈಯರ್ ಸೆಕೆಂಡರಿ ಶಾಲೆಯ ಪ್ಯೂನ್ ರಬ್ಬರ್ ತೋಟದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಂಬ್ಡಾಜೆ ಉಬ್ರಂಗಳ ಸೀತಾಂ ಗುಲಿ ನಿವಾಸಿ ಎಸ್. ಬಾಲಕೃಷ್ಣ (48) ಮೃತಪಟ್ಟ ವ್ಯಕ್ತಿ. ಶನಿವಾರ ರಾತ್ರಿ ಊಟ ಮಾಡಿ ಇವರು ನಿದ್ರಿಸಿದ್ದರು. ನಿನ್ನೆ ಮುಂಜಾನೆ ನಾಪತ್ತೆಯಾಗಿದ್ದರೆನ್ನಲಾಗಿದೆ. ಇದರಿಂದ ಮನೆಯವರು ಹುಡುಕಾಟ ನಡೆಸುತ್ತಿದ್ದಾಗ ಮನೆ ಸಮೀಪದ ರಬ್ಬರ್ ತೋಟದ ಮರದ ರೆಂಬೆಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆಸಲಾಯಿತು. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಾಲಿಂಗ ಮಣಿ ಯಾಣಿ- ಕುಸುಮತಿ ದಂಪತಿ ಯ ಪುತ್ರನಾದ ಮೃತರು ಪತ್ನಿ ಶೀಲ, ಸಹೋದರ- ಸಹೋದರಿಯರಾದ ರವೀಂದ್ರ, ಶ್ರೀದೇವಿ, ಸುಮನ, ಪೂರ್ಣಿಮ, ಶಾಂತ, ದೀಪಿಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.