ಸ್ನೇಹಿತನೊಂದಿಗೆ ಹೊಳೆಗೆ ಹಾರಿದ ಪೊಲೀಸ್ ಪತ್ನಿ ಯುವತಿ ಅಪಾಯದಿಂದ ಪಾರು; ಯುವಕನಿಗಾಗಿ ಶೋಧ

ಕಾಸರಗೋಡು: ಬೇಕಲ ಪೆರಿಯಾಟಡ್ಕದಿಂದ ನಾಪತ್ತೆಯಾದ ಪೊಲೀಸನ ಪತ್ನಿ ಹಾಗೂ ಸ್ನೇಹಿತ ವಳಪಟ್ಟಣಂನ ಹೊಳೆಗೆ ಹಾರಿದ್ದು, ಬಳಿಕ ಯುವತಿ ಈಜಿ ದಡಸೇರಿ ಅಪಾಯದಿಂದ ಪಾರಾಗಿದ್ದಾಳೆ. ಯುವಕ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ನಡೆಸ ಲಾಗುತ್ತಿದೆ.

ಪೊಲೀಸ್ ಹುದ್ದೆಯಲ್ಲಿರುವ ಅಜಯ್ ವಿನ್ಸನ್‌ರ ಪತ್ನಿ ಆನಿಮೋಳ್ (38) ನಿನ್ನೆ ಬೆಳಿಗ್ಗೆ 8 ಗಂಟೆಗೆ ಪೆರಿಯಾಟಡ್ಕದ ಮನೆಯಿಂದ ನಾಪತ್ತೆಯಾಗಿರುವುದಾಗಿ ಬೇಕಲ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವ ವೇಳೆ ಆನಿಮೋಳ್ ಹಾಗೂ ಅಜಯ್ ವಿನ್ಸನ್‌ರ  ಸ್ನೇಹಿತನೂ ಪೆರಿಯಾಟಡ್ಕ ಸೀನಿಯರ್ ರಾಜು ಇಂದು ಮುಂಜಾನೆ ವಳಪಟ್ಟಣಂ ಹೊಳೆಗೆ ಹಾರಿದ್ದಾರೆಂಬ ಮಾಹಿತಿ ಲಭಿಸಿದೆ.  ಭಾರೀ ಪ್ರಮಾಣದಲ್ಲಿ ನೀರು ತುಂಬಿ ಹರಿಯುತ್ತಿರುವ ಹೊಳೆಯಿಂದ ಆನಿಮೋಳ್ ಈಜಿ ಮೇಲೇರಿದ್ದಾಳೆ. ಅಪರಿಚಿತ ಯುವತಿ ಹೊಳೆ ಬದಿ ಕಂಡುಬಂದ ಬಗ್ಗೆ ಸ್ಥಳೀಯರು ವಳಪಟ್ಟಣಂ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ತಲುಪಿ ಯುವತಿಯನ್ನು ಠಾಣೆಗೆ ತಲುಪಿಸಿ ವಿಚಾರಿಸಿದಾಗ ಆಕೆ ಘಟನೆ ಕುರಿತು ವಿವರಿಸಿದ್ದಾಳೆ. ಈ ವಿಷಯ ತಿಳಿದು ಬೇಕಲ ಪೊಲೀಸರು ವಳಪಟ್ಟಣಕ್ಕೆ ತೆರಳಿದ್ದಾರೆ.

RELATED NEWS

You cannot copy contents of this page