ಕುಂಬಳೆ ಪಂಚಾಯತ್‌ಗೆ ನಾಳೆ ಬಿಜೆಪಿ ಮಾರ್ಚ್
ಕುಂಬಳೆ: ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ವತಿಯಿಂದ ನಾಳೆ ಕುಂಬಳೆ ಗ್ರಾಮ ಪಂಚಾಯತ್ ಕಚೇರಿಗೆ ಪ್ರತಿಭಟನಾ ಮಾರ್ಚ್ ನಡೆಸಲಿದೆ. ಪಂಚಾಯತ್‌ನಲ್ಲಿ ಕಳೆದ 50 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಮುಸ್ಲಿಂ ಲೀಗ್ ಹಾಗೂ ಕಾಂಗ್ರೆಸ್‌ನ ಭ್ರಷ್ಟಾಚಾರ ಹಾಗೂ ದುರಾಡಳಿತ ವಿರುದ್ಧ ಮಾರ್ಚ್ ನಡೆಸುವುದಾಗಿ ಬಿಜೆಪಿ ಪ್ರಕಟಣೆ ತಿಳಿಸಿದೆ. ಬೆಳಿಗ್ಗೆ 10 ಗಂಟೆಗೆ ಬಿಜೆಪಿ ಕಚೇರಿ ಬಳಿಯಿಂದ ಹೊರಡುವ ಮಾರ್ಚ್ ಕುಂಬಳೆ ಪೇಟೆ ಮೂಲಕ ಸಾಗಿ ಪಂಚಾಯತ್ ಕಚೇರಿಗೆ ತಲುಪಿ ಬೃಹತ್ ಪ್ರತಿಭಟನೆ ನಡೆಯಲಿದೆ ಯೆಂದು ತಿಳಿಸಲಾಗಿದೆ.