ಮಳೆಗಾಲದಲ್ಲಿ ತಲೆಯೆತ್ತಿದ ಕಳ್ಳರ ಕಾಟಬ್ಯಾಂಕ್, ಹೋಟೆಲ್‌ನಲ್ಲಿ ಕಳವಿಗೆತ್ನ

ಕಾಸರಗೋಡು: ಬ್ಯಾಂಕ್ ಮತ್ತು ಹೋಟೆಲ್‌ನಲ್ಲಿ ಕಳವಿಗೆ ಯತ್ನಿಸಿದ ಘಟನೆ ನಡೆದಿದೆ. ಇಸಾಫ್ ಬ್ಯಾಂಕ್‌ನ ಚೆರ್ವತ್ತೂರು ಶಾಖೆ ಮತ್ತು ಅದೇ ಕಟ್ಟಡದಲ್ಲಿ ಕಾರ್ಯವೆಸಗುತ್ತಿರುವ ಹೋಟೆಲ್ ನಲ್ಲಿ ರಾತ್ರಿ ವೇಳೆ ಈ ಕಳವು ಯತ್ನ ನಡೆದಿದೆ.

ಕೋಟು ಹಾಗೂ ಮಾಸ್ಕ್ ಧರಿಸಿದ ಕಳ್ಳನೋರ್ವ ಈ ಯತ್ನ ನಡೆಸಿದ್ದಾನೆ. ಅದರ ಸಿಸಿ ಟಿವಿ ದೃಶ್ಯ ಪೊಲೀಸರಿಗೆ ಲಭಿಸಿದೆ.  ಇದರಂತೆ ಪ್ರಸ್ತುತ ಬ್ಯಾಂಕ್‌ನ  ಮೆನೇಜರ್ ಬಿಪಿನ್ ಸೆಬಾಸ್ಟಿನ್ ನೀಡಿದ ದೂರಿನಂತೆ ಚಂದೇರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಬ್ಯಾಂಕ್‌ನವರು  ಬೆಳಗ್ಗೆ ಬ್ಯಾಂಕ್ ತೆರೆಯಲು ಬಂದಾಗಲೇ ಕಳವು ಯತ್ನ ಗಮನಕ್ಕೆ ಬಂದಿದೆ. ಬ್ಯಾಂಕ್‌ನ ಶಟರ್‌ನ ಬೀಗ ಮುರಿದು ಒಳನುಗ್ಗಿದ ಕಳ್ಳರು ಅದರ ಭದ್ರತಾಕೊಠಡಿ ಒಡೆಯಲೆತ್ನಿಸಿ ದರೂ ಅದು ಸಫಲವಾಗಲಿಲ್ಲ. ಅದರಿಂದ ಕಳವು ಯತ್ನವನ್ನು ಅಲ್ಲಿಗೇ ಉಪೇಕ್ಷಿಸಿದ್ದರು. ಇದೇ ಬ್ಯಾಂಕ್ ಕಟ್ಟಡದ ಕೆಳ ಅಂತಸ್ತಿನಲ್ಲಿ ಕಾರ್ಯವೆಸಗುತ್ತಿರುವ ಹೋಟೆಲ್‌ನ ಬೀಗ ಒಡೆದು ಒಳನುಗ್ಗಿ ಅಲ್ಲಿದ್ದ ಸಹಾಯಧನ ಪೆಟ್ಟಿಗೆಯನ್ನು   ಸಾಗಿಸಿದ್ದಾರೆಂದು ಪೊಲೀಸ್ ತನಿಖೆಯಲ್ಲ್ಲಿ ಸ್ಪಷ್ಟಗೊಂಡಿದೆ.

ಮಳೆಗಾಲದಲ್ಲಿ ಸಾಧಾರಣವಾಗಿ ಕಳ್ಳರ ಉಪಟಳ ಹೆಚ್ಚಾಗುತ್ತಿದೆ. ಅದರಿಂದ ಬ್ಯಾಂಕ್, ಹಣಕಾಸು ಸಂಸ್ಥೆ, ವ್ಯಾಪಾರ ಸಂಸ್ಥೆಗಳು  ಮಾತ್ರ ವಲ್ಲ ಎಲ್ಲಾ ಮನೆಯವರು ಗರಿಷ್ಠ ಜಾಗ್ರತೆ ಪಾಲಿಸಬೇಕೆಂಬ ಮುನ್ನೆಚ್ಚ ರಿಕೆಯನ್ನು ಇದೇ ಸಂದರ್ಭದಲ್ಲಿ ಪೊಲೀಸರು ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page