ಪಾನ್‌ಕಾರ್ಡ್‌ಗೆ ಆಧಾರ್ ಇಂದಿನಿಂದ ಕಡ್ಡಾಯ: ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 58.50 ರೂ. ಇಳಿಕೆ

ನವದೆಹಲಿ: ಈ ತಿಂಗಳ ಮೊದಲ ದಿನವಾದ ಇಂದಿನಿಂದ ತೈಲ ಕಂಪೆನಿಗಳು ೧೯ ಕೆಜಿ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 58.50 ರೂ. ಇಳಿಕೆ ಮಾಡಿದೆ. ಇದನ್ನು ಇಂದಿನಿಂದಲೇ ಜ್ಯಾರಿಗೊಳಿಸಲಾಗಿದೆ. ೧೯ ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂ ಡರ್‌ಗೆ ಬೆಲೆ ಈಗ 1665 ರೂ. ಇದೆ.

ತೈಲ ಮಾರುಕಟ್ಟೆ ಕಂಪೆನಿಗಳು ಹೊಸ ದರಗಳನ್ನು ಬಿಡುಗಡೆಮಾಡಿದ್ದು, ಅದರಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಳಿಸಿದ್ದರೂ, ಗೃಹ ಬಳಕೆಗಾಗಿರುವ ದೇಶೀಯ ಅನಿಲ ಸಿಲಿಂಡರ್ ಅಂದರೆ, 14 ಕೆಜಿ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ತರಲಾಗಿಲ್ಲ.

ಗೃಹ ಬಳಕೆ ಸಿಲಿಂಡರ್‌ಗಳ ಮೇಲೆ ಸರಕಾರ ನೇರ ಸಬ್ಸಿಡಿ ನೀಡುತ್ತದೆ. ಇದರಂತೆ ಉಜ್ವಲ ಯೋಜನೆಯಲ್ಲಿ ಫಲಾನುಭವಿಗಳಿಗೆ ಪ್ರತೀ ಸಿಲಿಂಡರ್‌ನಲ್ಲಿ ತಲಾ 300 ರೂ.ನಂತೆ ಸಬ್ಸಿಡಿ ನೀಡುತ್ತಿದೆ. 2025-26ನೇ ಕೇಂದ್ರ ಬಜೆಟ್‌ನಲ್ಲಿ ಎಲ್‌ಪಿಜಿ ಸಬ್ಸಿಡಿಗಾಗಿ ಕೇಂದ್ರ ಸರಕಾರ 11,100 ಕೋಟಿ ರೂ. ನಿಗದಿ ಪಡಿಸಿದೆ. ಆದರೆ ವಾಣಿಜ್ಯ ಲಿಸಿಂಡರ್‌ಗಳಿಗೆ ಯಾವುದೇ ಸಬ್ಸಿಡಿ ನೀಡಲಾಗುತ್ತಿಲ್ಲ.

ಇದರ ಹೊರತಾಗಿ ಪಾನ್ ಕಾರ್ಡ್‌ಗೆ ಆಧಾರ್ ಕಾರ್ಡ್‌ನ್ನು ಇಂದಿನಿಂದ  ಕಡ್ಡಾಯಗೊಳಿಸಲಾಗಿದೆ. ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಸಿ)ಯ ಹೊಸ ನಿಯಮಗಳ ಪ್ರಕಾರ ಇದನ್ನು ಕಡ್ಡಾಯಗೊಳಿಸ ಲಾಗಿದೆ. ಇದರಿಂದಾಗಿ ಪಾನ್ ಕಾರ್ಡ್ ಪಡೆಯಲು ಬಯಸುವ ಜನರು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಇದರೊಂದಿಗೆ  ಪಾನ್‌ಕಾರ್ಡ್‌ಗೆ ಆಧಾರ್ ಪರಿಶೀಲನೆಯನ್ನೂ ಕಡ್ಡಾಯಗೊಳಿಸ ಲಾಗಿದೆ.

ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೂ ಆಧಾರ್ ಕಾರ್ಡ್ ಇಂದಿನಿಂದ ಕಡ್ಡಾಯಗೊಳಿಸಲಾಗಿದೆ. ಇದರಂತೆ ಐಆರ್‌ಸಿಟಿಸಿ ಮೊಬೈಲ್ ಅಪ್ಲಿಕೇಷನ್ ಮೂಲಕ ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೆ ಆಧಾರ್ ಕಡ್ಡಾಯ ಗೊಳಿಸಲಾಗಿದೆ. ಇದರ ಹೊರತಾಗಿ ಕ್ರೆಡಿಟ್ ಕಾರ್ಡ್‌ಗಳಿಗೆ ಇಂದಿನಿಂದ ಕೆಲವು ಹೊಸ ಶುಲ್ಕ ಜ್ಯಾರಿಗೆ ತರಲಾಗಿದೆ. ಮಾತ್ರವಲ್ಲ ಎಟಿಎಂ ಶುಲ್ಕಗಳಿಗೆ ಸಂಬಂಧಿಸಿದ ನಿಯಮ ಗಳನ್ನು ಇಂದಿನಿಂದ ಬದಲಾ ಯಿಸಲಾಗಿದೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page