ಕಾಸರಗೋಡಿನಲ್ಲಿ ಕನ್ನಡವನ್ನು ಬಲಪಡಿಸುವಲ್ಲಿ ಕನ್ನಡ ಪತ್ರಿಕೆಗಳ ಪಾತ್ರ ಮಹತ್ತರ- ವಿಶಾಲಾಕ್ಷ ಪುತ್ರಕಳ

ಕಾಸರಗೋಡು: ಕಾಸರಗೋಡಿನಲ್ಲಿ ಕನ್ನಡವನ್ನು ಬಲಪಡಿಸುವಲ್ಲಿ ಕನ್ನಡ ಪತ್ರಿಕೆಗಳ ಪಾತ್ರ ಮಹತ್ತರವಾದುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ, ನಿವೃತ್ತ ಅಧ್ಯಾಪಕ ವಿಶಾ ಲಾಕ್ಷ ಪುತ್ರಕಳ ನುಡಿದರು. ಕಾಸರ ಗೋಡು ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಆಶ್ರಯದಲ್ಲಿ ನಿನ್ನೆ ಸಂಜೆ ಕೋಟೆಕಣಿ ಶ್ರೀರಾಮನಾಥ ಸಾಂಸ್ಕೃ ತಿಕ ಭವನದಲ್ಲಿ ನಡೆದ ಕನ್ನಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯ ಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದು ಪತ್ರಿಕೆಗಳು ಸವಾಲುಗಳನ್ನು ಎದುರಿಸುತ್ತಿವೆ. ಹೊಸ ತಲೆಮಾರು ಪತ್ರಿಕೆ ಓದುವುದರಿಂದ ಹಿಂಜರಿ ಯುತ್ತಿದೆ. ಅವರನ್ನು ಪತ್ರಿಕೆ ಓದಿನತ್ತ ಆಕರ್ಷಿಸಲು ಹಿರಿಯರು ಪ್ರಯತ್ನಿಸಬೇಕು. ಎಲ್ಲಾ ಶಾಲೆಗಳಲ್ಲೂ ಮಕ್ಕಳಿಗೆ ಕನ್ನಡ ಪತ್ರಿಕೆ ಓದಲು ಸೌಕರ್ಯ ಕಲ್ಪಿಸಬೇಕು ಎಂದರು. ಅದೇ ರೀತಿ ಕನ್ನಡಕ್ಕೆ ಅವಗಣನೆಯಾ ದಾಗಲೆಲ್ಲಾ ಕನ್ನಡ ಪತ್ರಕರ್ತರು ತಮ್ಮ ಬರಹಗಳ ಮೂಲಕ ಧ್ವನಿಯೆತ್ತಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಇದು ಇನ್ನಷ್ಟು ನಡೆಯಲಿ ಎಂದು ನುಡಿದರು. ಪತ್ರಕರ್ತ ವೀಜೀ ಕಾಸರಗೋಡು ಪ್ರಧಾನ ಭಾಷಣ ಮಾಡಿ ಇದೀಗ ಸಾಮಾಜಿಕ ಜಾಲತಾಣಗಳ ಹಾವಳಿ ತೀವ್ರಗೊಂಡರೂ ಪತ್ರಿಕೆಗಳನ್ನು ಕೊಂಡು ಓದುವುದರಿಂದ ಲಭಿಸುವ ನೆಮ್ಮದಿ ಜಾಲತಾಣಗಳಿಂದ ಲಭಿಸದು. ಆದ್ದ ರಿಂದ ಪತ್ರಿಕೆಗಳಿಗೆ ಹೆಚ್ಚಿನ  ಪ್ರಾಧಾನ್ಯತೆ ಇದೆ ಎಂದರು. ಪತ್ರಕರ್ತರಾದ ಜಯ ಮಣಿಯಂಪಾರೆ, ಜಯಶ್ರೀ ಆರ್ಯಾಪು ಶುಭಾಶಂಸನೆಗೈದರು. ಸಂಘಟಕ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ, ಕಾಸರಗೋಡಿನಲ್ಲಿ ಕನ್ನಡ ಪತ್ರಿಕೆಗಳ ಬೆಳವಣಿಗೆ ಕುರಿತು ವಿವರಿಸಿದರು. ಸಾಮಾಜಿಕ- ಧಾರ್ಮಿಕ ಮುಂದಾಳು ಕೆ.ಎನ್. ವೆಂಕಟ್ರಮಣ ಹೊಳ್ಳ, ಹಿರಿಯ ಪತ್ರಕರ್ತರಾದ ಪ್ರದೀಪ್ ಬೇಕಲ್, ರಾಧಾಕೃಷ್ಣ ಉಳಿಯತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಅಶೋಕ್ ಕೆ. ಕಾಸರಗೋಡು ಅವರಿಗೆ ಪತ್ರಿಕಾ ಗೌರವಾರ್ಪಣೆ ನಡೆಸಲಾಯಿತು. ಪುರುಷೋತ್ತಮ ಭಟ್ ಸನ್ಮಾನಿತರ ಪರಿಚಯ ಪತ್ರ ವಾಚಿಸಿ ದರು. ದಿವಾಕರ ಅಶೋಕನಗರ ಪ್ರಾರ್ಥನೆ ಹಾಡಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಹರಿದಾಸ ಜಯಾನಂದ ಕುಮಾರ್  ಹೊಸದುರ್ಗ ವಿಶಿಷ್ಟ ಶೈಲಿಯಲ್ಲಿ ಹಾಡಿನ ಮೂಲಕ ವಂದನೆಗಳನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *

You cannot copy content of this page