ಬದಿಯಡ್ಕದಲ್ಲಿ 17ರ ಬಾಲಕಿಗೆ ಕಿರುಕುಳ ನೀಡಿದ ಯುವಕ: ಪೋಕ್ಸೋ ಪ್ರಕಾರ ಕಸ್ಟಡಿಯಲ್ಲಿ
ಬದಿಯಡ್ಕ: ಪೋಕ್ಸೋ, ಮಾನಭಂಗ ಎಂಬೀ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಯಾದ ಯುವಕನನ್ನು ಬದಿಯಡ್ಕ ಪೊಲೀಸರು ಕಸ್ಟಡಿಗೆ ತೆಗೆದುಕೊಂ ಡಿದ್ದಾರೆ. ಉಳ್ಳೋಡಿಯ ಶಶಿಧರ(38) ಎಂಬಾತ ಕಸ್ಟಡಿಯಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 25ರ ಹರೆಯದ ಯುವತಿಯ ದೂರಿನಂತೆ ಪೊಲೀಸರು ಈತನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಯುವತಿಗೆ 17 ವರ್ಷ ಪ್ರಾಯವಿದ್ದಾಗ ಮದುವೆಯಾಗುವುದಾಗಿ ಭರವಸೆಯೊಡ್ಡಿ ಆರೋಪಿ ಕಿರುಕುಳ ನೀಡಿದ್ದನೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕೇಸು ದಾಖಲಿಸಲಾಗಿದೆ. ಇದೀಗ 25ರ ಹರೆಯದ ದೂರುದಾತೆಗೆ 18 ವರ್ಷ ಕಳೆದ ಬಳಿಕ ಕಿರುಕುಳ ನೀಡಿದ ಆರೋಪದಂತೆ ಮಾನಭಂಗ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮದುವೆ ಭರವಸೆಯಿಂದ ಯುವಕ ಹಿಂಜರಿದುದರಿಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಯ ಬಂಧನ ದಾಖಲಿಸಿದ ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.