ಮಸೀದಿಯಿಂದ 3.10 ಲಕ್ಷ ರೂ, ಚಿನ್ನ ಕಳವು
ಕಾಸರಗೋಡು: ಮಸೀದಿಗೆ ಕಳ್ಳರು ನುಗ್ಗಿ 3,10,000 ರೂ. ನಗದು ಮತ್ತು ಎರಡು ಪವನ್ ಚಿನ್ನ ಕಳವುಗೈದ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಕೂಡ್ಲಿನ ಚೂರಿ ಸಲಫಿ ಮಸೀದಿಯಲ್ಲಿ ಈ ಕಳವು ನಡೆದಿದೆ. ಈ ಬಗ್ಗೆ ಮಸೀದಿಯ ಅಡ್ಮಿನಿಸ್ಟ್ರೇಟರ್ ಮುಹಮ್ಮದ್ ಮಶೂದ್ ದೂರು ನೀಡಿದ್ದು, ಜೂನ್ 24ರಂದು ಬೆಳಿಗ್ಗೆ 8ರಿಂದ 8.30ರ ನಡುವಿನ ಅಂತರದಲ್ಲಿ ಮಸೀದಿಯ ಕಚೇರಿಯೊಳಗೆ ಕಳ್ಳರು ನುಗ್ಗಿ ಅಲ್ಲಿದ್ದ ಮೇಜಿನ ಒಳಗೆ ಇರಿಸಲಾಗಿದ್ದ ನಗನಗದನ್ನು ಕಳವುಗೈದಿರುವುದಾಗಿ ತಿಳಿಸಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಸೀದಿಯ ಸಿಸಿ ಟಿವಿ ಕ್ಯಾಮರಾದಲ್ಲಿ ಕಳ್ಳನೆಂದು ಶಂಕಿಸಲಾಗುತ್ತಿರುವ ಓರ್ವನ ದೃಶ್ಯವೂ ಪತ್ತೆಯಾಗಿದ್ದು, ಅದರ ಜಾಡು ಹಿಡಿದು ಪೊಲೀಸರು ಕಳ್ಳನ ಪತ್ತೆಗಾಗಿರುವ ಯತ್ನ ಮುಂದುವರಿಸಿದ್ದಾರೆ.