ಕುತ್ತಿಗೆಗೆ ಹಗ್ಗ ಸಿಲುಕಿ ಒದ್ದಾಡುತ್ತಿದ್ದ ದನವನ್ನು ಸ್ಥಳೀಯರ ನೆರವಿನಿಂದ ರಕ್ಷಿಸಿದ ಅಗ್ನಿಶಾಮಕ ದಳ
ಮಂಜೇಶ್ವರ: ದನವೊಂದರ ಕುತ್ತಿಗೆಯಲ್ಲಿ ಹಗ್ಗ ಬಿಗಿದು ಜೀವನ್ಮರಣ ಹೋರಾಟದಲ್ಲಿದ್ದಾಗ ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ದನವನ್ನು ಪಾರು ಮಾಡಿದ್ದಾರೆ. ಮಂಜೇಶ್ವರ ಬಳಿಯ ಚೌಕಿಯಲ್ಲಿ ಮಂಗಳವಾರ ರಾತ್ರಿ ದನವೊಂದರ ಕುತ್ತಿಗೆಯಲ್ಲಿ ಹಗ್ಗ ಬಿಗಿದುಕೊಂಡು ಒದ್ದಾಡುತ್ತಿರುವ ದೃಶ್ಯ ಊರವರು ಕಂಡಿದ್ದರು. ಆದರೆ ಹತ್ತಿರ ಹೋಗಲು ಬಿಡದ ಕಾರಣ ಉಪ್ಪಳ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು, ಅವರು ತಲುಪಿ ಊರವರ ಸಹಾಯದಿಂದ ಸಾಹಸಿಕವಾಗಿ ದನವನ್ನು ಹಿಡಿದು ಹಗ್ಗವನ್ನು ತೆರವುಗೊಳಿಸಿದ್ದಾರೆ. ಬಳಿಕ ಗಾಯಕ್ಕೆ ಔಷಧಿ ಹಚ್ಚಲಾಗಿದೆ. ಆದರೆ ಇದು ಯಾರ ದನವೆಂದು ಮಾಹಿತಿ ಲಭಿಸಿಲ್ಲ. ಅಗ್ನಿಶಾಮಕದಳದ ಸೀನಿಯರ್ ಆಫೀಸರ್ ಸಂದೀಪ್, ಇತರರಾದ ಮೊಹಮ್ಮದ್ ಶಾಫಿ, ಅಭಿಜಿತ್, ಚಾಲಕ ಶರಣ್, ಹೋಂಗಾರ್ಡ್ ಮ್ಯಾಥ್ಯು ಐಸಕ್, ಜನಪ್ರತಿನಿಧಿ ಅಬೂಬಕ್ಕರ್, ಅಬೂಬಕ್ಕರ್ ಸಿದ್ದಿಕ್, ಶರೀಫ್ ಪಾನವೂರು, ಸುಹೈಲ್, ಹಾರಿಸ್, ರಮೇಶ್, ಫಹದ್, ಶಂಸು ಸಹಕರಿಸಿದರು.