ಜನರಲ್ ಆಸ್ಪತ್ರೆಯ ಕಟ್ಟಡ ಅಪಾಯಭೀತಿಯಲ್ಲಿ: ಜಿಲ್ಲಾ ಟಿ.ಬಿ ಕೇಂದ್ರ ಉಪಯೋಗಶೂನ್ಯವೆಂದು ಘೋಷಿಸಿದ ಕಟ್ಟಡದಲ್ಲಿ
ಕಾಸರಗೋಡು: ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮೂರಂತಸ್ತಿನ ಕಟ್ಟಡ ಕುಸಿದುಬಿದ್ದು ಮಹಿಳೆ ಮೃತಪಟ್ಟ ಘಟನೆಗೆ ಸಮಾನವಾದ ರೀತಿಯಲ್ಲಿ ಕಾಸರ ಗೋಡಿನಲ್ಲೂ ಸರಕಾರಿ ಆಸ್ಪತ್ರೆ ಯ ಕಟ್ಟಡವೊಂದು ಅಪಾಯಭೀತಿಯೊಡ್ಡುತ್ತಿದೆ.
ಜನರಲ್ ಆಸ್ಪತ್ರೆ ಆವರಣದೊಳಗೆ ಜಿಲ್ಲಾ ಟಿಬಿ ಕೇಂದ್ರ ಕಾರ್ಯಾಚರಿಸುವ ಕಟ್ಟಡ ಶೋಚನೀಯ ಸ್ಥಿತಿಯಲ್ಲಿದ್ದು, ಅಪಾಯಭೀತಿ ಸೃಷ್ಟಿಸುತ್ತಿದೆ. ಈ ಕೇಂದ್ರದ ಕಟ್ಟಡವನ್ನು ಒಂದು ವರ್ಷ ಹಿಂದೆ ಮುರಿದು ತೆರವುಗೊಳಿಸಲಾ ಗಿದೆ. ಅನಂತರ ಕೇಂದ್ರ ಉಪಯೋಗ ಶೂನ್ಯವೆಂದು ಅಧಿಕಾರಿಗಳೇ ಘೋಷಿ ಸಿದ ಕಟ್ಟಡದಲ್ಲಿ ಕಾರ್ಯಾಚರಿಸು ತ್ತಿದೆ. ಕಾಂಕ್ರೀಟ್‌ನ ಮೇಲ್ಛಾವಣಿಗೆ ಪೂರ್ಣವಾಗಿ ಪ್ಲಾಸ್ಟಿಕ್ ಶೀಟ್ ಹೊದಿಸಿ ಮುಚ್ಚಲಾಗಿದೆ. ಹೊರರೋಗಿ ವಿಭಾಗ ಹಾಗೂ ಸ್ಯಾಂಪಲ್ ಕಲೆಕ್ಷನ್ ಸೆಂಟರ್ ಈ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಭಾರೀ ಗಾಳಿ ಮಳೆಗೆ ಈ ಕಟ್ಟಡ ಅಪಾಯಕ್ಕೀಡಾಗಲಿದೆಯೆಂಬ ಭೀತಿಯನ್ನು ಆಸ್ಪತ್ರೆಗೆ ತಲುಪುವ ರೋಗಿಗಳು ಹಾಗೂ ಸಂಬಂಧಿಕರು ವ್ಯಕ್ತಪಡಿಸುತ್ತಿದ್ದಾರೆ.