ಮೊಬೈಲ್ ಫೋನ್ ಲಪಟಾವಣೆ: ಆರೋಪಿ ಸೆರೆ
ಕಾಸರಗೋಡು: ಮೊಬೈಲ್ ಫೋನ್ ಲಪಟಾಯಿಸಿದ ಪ್ರಕರಣದ ಆರೋಪಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಮುಟ್ಟತ್ತೋಡಿ ಪಡುವಡ್ಕ ನಿವಾಸಿ ಅಸರುದ್ದೀನ್ ಎನ್.ಎ. (35) ಬಂಧಿತ ಆರೋಪಿ. ಈತನ ವಿರುದ್ಧ ಮುಳಿಯಾರು ಬಾಲಡ್ಕ ನಿವಾಸಿ ಮುಹಮ್ಮದ್ ನಿಶಾದ್ ಎಂಬವರು ನೀಡಿದ ದೂರಿನ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೂನ್ 24ರಂದು ಪಡುವಡ್ಕ ಬಳಿ ತಾನು ಸ್ನೇಹಿತನೊಂದಿಗೆ ಮಾತನಾಡುತ್ತಿದ್ದ ವೇಳೆ ತನ್ನ ಕೈಯಲ್ಲಿದ್ದ 1,06,000 ರೂ. ಬೆಲೆಯ ಐ-ಫೋನನ್ನು ಆರೋಪಿ ಕಸಿದು ಪರಾರಿಯಾಗಿದ್ದನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮೊಹಮ್ಮದ್ ನಿಶಾದ್ ಆರೋಪಿಸಿದ್ದಾರೆ.