ಮದ್ಯದಮಲಿನಲ್ಲಿ ಹೊಡೆದಾಟ: ಚದುರಿಸಲೆತ್ನಿಸಿದ ಪೊಲೀಸರ ಮೇಲೆ ಹಲ್ಲೆ ; ಇಬ್ಬರ ಬಂಧನ

ಸೀತಾಂಗೋಳಿ: ಮದ್ಯದ ಮಲಿನಲ್ಲಿ ಇಬ್ಬರು ವ್ಯಕ್ತಿಗಳು  ಮದ್ಯದಂಗಡಿ ಮುಂದೆ ಹೊಡೆದಾಡಿಕೊಂಡಿದ್ದು, ಈ ವೇಳೆ ಅವರನ್ನು ಚದುರಿಸಲು ಯತ್ನಿಸಿದ ಪೊಲೀಸರ ಮೇಲೆ ಆ ಇಬ್ಬರು ಹಲ್ಲೆಗೈದ ಘಟನೆ ನಿನ್ನೆ ಸಂಜೆ ಸೀತಾಂಗೋಳಿಯಲ್ಲಿ ನಡೆದಿದೆ. ಈ ಸಂಬಂಧ  ಸೂರಂಬೈಲು ನಿವಾಸಿ ಋತಿಕ್ ಎಸ್ (25) ಹಾಗೂ ಬೇಳ ಪೆರಿಯಡ್ಕದ ಹರೀಶ ಪಾಟಾಳಿ (43) ಎಂಬಿವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.  ನಿನ್ನೆ ಸಂಜೆ  ಈ ಇಬ್ಬರು  ಸೀತಾಂಗೋಳಿಯ ಬಿವರೇಜಸ್‌ನ ಮದ್ಯದಂಗಡಿ ಮುಂದೆ ಮದ್ಯದಮಲಿನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆನ್ನಲಾಗಿದೆ. ಈ ವಿಷಯ ತಿಳಿದು ಅಲ್ಲಿಗೆ ತಲುಪಿದ ಸೀತಾಂಗೋಳಿ ಪೊಲೀಸ್ ಸಹಾಯ ಕೇಂದ್ರದ ಪೊಲೀಸರು ಅವರಿಬ್ಬರನ್ನು ಚದುರಿಸಲು ಯತ್ನಿಸಿದಾಗ ಅವರು ಪೊಲೀಸರ ಮೇಲೆ ತಿರುಗಿಬಿದ್ದಿದ್ದಾರೆಂದು  ದೂರಲಾಗಿದೆ. ಈ ಬಗ್ಗೆ ತಿಳಿದ ಕುಂಬಳೆ ಎಸ್‌ಐ ಶ್ರೀಜೇಶ್ ನೇತೃತ್ವದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಅಲ್ಲಿಗೆ ತೆರಳಿ ಆ ಇಬ್ಬರನ್ನು ಬಂಧಿಸಿದ್ದಾರೆ. ಬಳಿಕ ಸಿಪಿಒ ಮೊಹಮ್ಮದ್ ಫಹದ್ ನೀಡಿದ ದೂರಿನಂತೆ ಆರೋಪಿಗಳ ವಿರುದ್ದ ಕೇಸು ದಾಖಲಿಸಲಾಗಿದೆ.   ಆರೋಪಿಗಳನ್ನು  ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು ಈ ವೇಳೆ ಅವರಿಗೆ ರಿಮಾಂಡ್ ವಿಧಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page