ಪೊಲೀಸರ ಮೇಲೆ ಕೈಮಾಡಲೆತ್ನಿಸಿದ ಪ್ರಕರಣದ ಆರೋಪಿ ಸೆರೆ
ಕಾಸರಗೋಡು: ಪೊಲೀಸರ ಮೇಲೆ ಕೈಮಾಡಲೆತ್ನಿಸಿದ ಪ್ರಕರಣದ ಆರೋಪಿ ಯನ್ನು ಮೇಲ್ಪರಂಬ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎ. ಸಂತೋಷ್ ಕುಮಾರ್ ಬಂಧಿಸಿದ್ದಾರೆ. ಮೇಲ್ಪರಂಬ ಮಮ್ಮುಂಞಿ ಹಾಜಿ ಹೌಸ್‌ನ ಎಂ. ಎಚ್. ಮನಾಫ್ (34) ಬಂಧಿತ ಆರೋಪಿ. ಮೇಲ್ಪರಂಬ ದಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಯುವಕರು ಮತ್ತು ಕಾರಿನಲ್ಲಿ ಹೋಗುತ್ತಿದ್ದ ಮನಾಫ್ ಮಧ್ಯೆ ಪರಸ್ಪರ ವಾಗ್ವಾದ ನಡೆದಿತ್ತು. ಆಗ ಅದನ್ನು ನಿಯಂತ್ರಿಸಲು ಬಂದ ಪೊಲೀಸ್ ವಿಭಾಗದ ಪ್ಲೈಯಿಂಗ್ ಸ್ಕ್ವಾಡ್‌ನ ಪೊಲೀಸರ ಮೇಲೆ ಕೈಮಾಡಿ ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಯುಂಟು ಮಾಡಿದ ಆರೋಪದಂತೆ ಮನಾಫ್‌ನ ವಿರುದ್ಧ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿದೆ.