ಮಾದಕ ವಿರುದ್ಧ ರ‍್ಯಾಲಿಯ ಸಂಘಟಕನಾಗಿದ್ದ ಸಿಪಿಎಂ ನೇತಾರ ಎಂಡಿಎಂಎ ಸಹಿತ ಸೆರೆ
ಕಣ್ಣೂರು: ಸಿಪಿಎಂ ಲೋಕಲ್ ಕಮಿಟಿ ಸದಸ್ಯನನ್ನು ಎಂಡಿಎಂಎ ಸಹಿತ ಪೊಲೀಸರು ಸೆರೆ ಹಿಡಿದಿ ದ್ದಾರೆ. ವಳಪಟ್ಟಣಂ ಲೋಕಲ್ ಕಮಿಟಿ ಸದಸ್ಯ ವಿ.ಕೆ. ಶಮೀರ್ ಎಂಬಾತ ಬಂಧಿತ ವ್ಯಕ್ತಿ. ಈತನ ಕೈಯಿಂದ 18 ಗ್ರಾಂ ಎಂಡಿಎಂಎ ವಶಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನಿಂದ ಸ್ನೇಹಿತನೊಂದಿಗೆ ಶಮೀರ್ ಕಾರಿನಲ್ಲಿ ಬರುತ್ತಿದ್ದಾಗ ಇರಿಟ್ಟಿ ಕೂಟುಪುಳದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಮಾದಕವಸ್ತು ಪತ್ತೆಯಾಗಿದೆ. ಡಿವೈಎಫ್‌ಐ ಪ್ರಾದೇಶಿಕ ನೇತಾರ ನಾದ ಈತ ಕಳೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ವಳಪಟ್ಟಣಂ ಗ್ರಾಮ ಪಂಚಾ ಯತ್‌ನ ೫ನೇ ವಾರ್ಡ್‌ನಲ್ಲಿ ಎಲ್‌ಡಿಎಫ್ ಅಭ್ಯರ್ಥಿಯಾಗಿ ದ್ದನು. ಇತ್ತೀಚೆಗೆ ಸಿಪಿಎಂ ವಳ ಪಟ್ಟಣಂನಲ್ಲಿ ನಡೆಸಿದ ಮಾದಕ ವಸ್ತು ವಿರುದ್ಧ ರ‍್ಯಾಲಿಯ ಸಂಘಟಕ ದಲ್ಲಿ ಒಬ್ಬನಾಗಿದ್ದನು. ಇದೇ ವೇಳೆ ಶಮೀರ್‌ನನ್ನು ತನಿಖಾ ವಿಧೇಯ ವಾಗಿ ಪಕ್ಷದಿಂದ ಅಮಾನತುಗೊ ಳಿಸಿರುವುದಾಗಿ ಸಿಪಿಎಂ ಜಿಲ್ಲಾ ನಾಯಕತ್ವ ತಿಳಿಸಿದೆ.