ಕಟ್ಟೆಯಲ್ಲಿ ಕುಳಿತಿದ್ದ ಆಟೋ ಚಾಲಕ ಬಾವಿಗೆ ಬಿದ್ದು ಸಾವು
ತಿರುವನಂತಪುರ: ಬಾವಿ ಕಟ್ಟೆಯಲ್ಲಿ ಕುಳಿತು ಮನೆಯವ ರೊಂದಿಗೆ ಮಾತನಾಡುತ್ತಿದ್ದ ಆಟೋ ಚಾಲಕ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ತಿರುವನಂತಪುರ ಬಳಿಯ ರಲ್ಲಿಯೂರು ವಾರುವಿಳ ನಿವಾಸಿ ಸತೀಶನ್ (56) ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ 5.30ರ ವೇಳೆ ಇವರು ಕಟ್ಟೆಯಲ್ಲಿ ಕುಳಿತ ಮಾತನಾಡುತ್ತಿದ್ದಾಗ ೫೦ ಅಡಿ ಆಳದ ಬಾವಿಗೆ ಬಿದ್ದಿದ್ದಾರೆ. ಕೂಡಲೇ ಅಗ್ನಿ ಶಾಮಕದಳ ತಲುಪಿ ಮೇಲಕ್ಕೆತ್ತಿ ದರೂ ಜೀವ ರಕ್ಷಿಸಲಾಗಲಿಲ್ಲ.