ಗಾಂಜಾ ಸಹಿತ ಓರ್ವ ಸೆರೆ
ಉಪ್ಪಳ: ಮಂಗಲ್ಪಾಡಿ ಬಳಿಯ ಬಂದ್ಯೋಡ್ ಅಡ್ಕದಲ್ಲಿ ನೂರು ಗ್ರಾಂ ಗಾಂಜಾ ಸಹಿತ ಓರ್ವನನ್ನು ಬಂಧಿಸ ಲಾಗಿದೆ. ಎಚ್.ಕೆ. ಅಬ್ದುಲ್ಲ (63) ಎಂಬಾತನನ್ನು ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ ಇನ್ಸ್ ಪೆಕ್ಟರ್ ವಿಷ್ಣುಪ್ರಕಾಶ್ ಹಾಗೂ ತಂಡ ಬಂಧಿಸಿದೆ. ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ಶ್ರೀನಿವಾಸನ್ ಪತ್ತಿಲ್, ಪ್ರಿವೆಂಟಿವ್ ಆಫೀಸರ್ಗಳಾದ ಕೆ. ನೌಶಾದ್, ಅಜೀಶ್, ಪ್ರಜಿತ್, ಸಿಇಒಗಳಾದ ಮಂಜುನಾಥನ್, ರಾಜೇಶ್, ಸ್ವಾತಿ ಮೊದಲಾದವರು ತಂಡಲ್ಲಿದ್ದರು.