ಕಾಸರಗೋಡು: ರೈಲ್ವೇಯಲ್ಲಿ ಉದ್ಯೋಗ ದೊರಕಿಸುವುದಾಗಿ ಭರವಸೆಯೊಡ್ಡಿ ವ್ಯಕ್ತಿಯೋರ್ವ ಚೆಮ್ನಾಡ್ ನಿವಾಸಿಯಾದ ಯುವಕನಿಂದ ೭ ಲಕ್ಷ ರೂಪಾ ಯಿ ಪಡೆದು ವಂಚಿಸಿರುವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಆರೋಪಿಯನ್ನು ಹುಡುಕಿಕೊಂಡು ಮೇಲ್ಪರಂಬ ಪೊಲೀಸರು ಉತ್ತರಪ್ರದೇಶಕ್ಕೆ ತೆರಳಿದ್ದಾರೆ. ಮಿಲಿಟರಿ ಅಧಿಕಾರಿ ಯೆಂದು ಸಾಮಾಜಿಕ ತಾಣಗಳ ಮೂಲಕ ಪರಿಚಯಗೊಂಡ ಉತ್ತರ ಪ್ರದೇಶ ನಿವಾಸಿ ಚೆಮ್ನಾಡ್ ನಿವಾಸಿ ಯುವಕನ ೭ ಲಕ್ಷ ರೂ. ಲಪಟಾಯಿಸಿದ್ದಾನೆ.
ಹಣ ಪಡೆದುಕೊಂಡ ಬಳಿಕ ಪ್ರವೇಶ ಪರೀಕ್ಷೆಗೆಂದು ತಿಳಿಸಿ ಯುವಕನನ್ನು ಚೆನ್ನೈಗೆ ಬರುವಂತೆ ತಿಳಿಸಿದ್ದನು. ಆದರೆ ಅಲ್ಲಿಗೆ ತಲಪಿದ ಬಳಿಕವೇ ತಾನು ವಂಚನೆಗೀಡಾದ ವಿಷಯ ಯುವಕನಿಗೆ ತಿಳಿದು ಬಂದಿದೆ. ಬಳಿಕ ಊರಿಗೆ ಮರಳಿ ಬಂದು ಪೊಲೀಸರಿಗೆ ದೂರು ನೀಡಿದ್ದಾನೆ. ಇದರಂತೆ ಕೇಸು ದಾಖ ಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.