ಸಿಪಿಎಂ ಕಾರ್ಯಕರ್ತ ನಿಧನ
ಮೊಗ್ರಾಲ್ ಪುತ್ತೂರು: ಸಿಪಿಎಂ ಚೌಕಿ ಬ್ರಾಂಚ್ ಸದಸ್ಯ ಕಲ್ಲಂಗೈ ನಿವಾಸಿ ರಾಮಚಂದ್ರ ಗಟ್ಟಿ (68) ನಿಧನ ಹೊಂದಿದರು. ಹೃದಯಾಘಾತ ಮರಣಕ್ಕೆ ಕಾರಣವೆನ್ನಲಾಗಿದೆ. ಟೈಲರ್ ಆಗಿರುವ ಇವರು ಮನೆ ಬಳಿಯಲ್ಲಿ ಅಂಗಡಿ ನಡೆಸುತ್ತಿದ್ದರು. ಅಂಗಡಿಯಲ್ಲೇ ಕುಸಿದುಬಿದ್ದಿದ್ದಾರೆ.
ಮೃತರು ಪತ್ನಿ ಶಾಲಿನಿ, ಮಕ್ಕಳಾದ ರೇಶ್ಮಾ, ರೇಖಾ, ಶೈಲೇಶ್,ಸಹೋದರ ಕೃಷ್ಣಪ್ಪ, ಸಹೋದರಿ ವೇದಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಚಂದ್ರಶೇಖರ ಈ ಹಿಂದೆ ನಿಧನಹೊಂದಿದ್ದಾರೆ.