ಯುವಕನನ್ನು ಅಪಹರಿಸಿ 18.46 ಲಕ್ಷ ರೂ. ಲಪಟಾವಣೆ: ಸೂತ್ರಧಾರನ ಬಂಧನ
ಕುಂಬಳೆ: ಕುಂಬಳೆ ಪೇಟೆಯಿಂದ ಯುವಕನನ್ನು ಹಾಡಹಗಲೇ ಕಾರಿನಲ್ಲ್ಲಿ ಅಪಹರಿಸಿ ಕೊಂಡೊಯ್ದು 18.46 ಲಕ್ಷ ರೂಪಾಯಿ ಲಪಟಾಯಿಸಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಕುಂಬಳೆ ಎಸ್.ಐ ಪ್ರದೀಪ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದ್ದಾರೆ.
ಧರ್ಮತ್ತಡ್ಕ ಚಳ್ಳಂಗಯ ನಿವಾಸಿ ಯೂಸಫ್ ಇರ್ಶಾದ್ (24) ಎಂಬಾತ ಬಂಧಿತ ಆರೋಪಿಯಾ ಗಿದ್ದಾನೆ. ಕುಂಬಳೆ ಮುಳಿಯಡ್ಕ ರಹ್ಮಾನಿಯ ಮಂಜಿಲ್‌ನ ಅಬ್ದುಲ್ ರಶೀದ್ (32) ಎಂಬವರನ್ನು ಕಳೆದ ಮೇ೬ರಂದು ಕುಂಬಳೆ ಪೇಟೆಯಿಂದ ಅಪಹರಿಸಿ ಹಣ ಲಪಟಾಯಿಸಿದ ಪ್ರಕರಣದಲ್ಲಿ ಇದೀಗ ಯೂಸಫ್ ಇರ್ಶಾದ್‌ನನ್ನು ಬಂಧಿಸಲಾಗಿದೆ.
ಮೇ 6ರಂದು ಮಧ್ಯಾಹ್ನ 2.30ಕ್ಕೆ ಕುಂಬಳೆ ಪೇಟೆಯಿಂದ ಅಬ್ದುಲ್ ರಶೀ ದ್‌ರನ್ನು ತಂಡವೊಂದು ಬಲವಂತವಾಗಿ ಕಾರಿಗೆ ಹತ್ತಿಸಿ ಸೀತಾಂಗೋಳಿ ಭಾಗಕ್ಕೆ ಕೊಂಡೊಯ್ದು ಹಲ್ಲೆ ನಡೆಸಿತ್ತು. ಬಳಿಕ ಅಬ್ದುಲ್ ರಶೀದ್‌ರ ಬ್ಯಾಂಕ್ ಖಾತೆ ಯಿಂದ 18,46,127 ರೂಪಾಯಿ ಗಳನ್ನು ಆರೋಪಿಗಳು ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. ಅನಂತರ ತಂಡ ಅಂದು ಸಂಜೆ 6.30ರ ವೇಳೆ ಅಬ್ದುಲ್ ರಶೀದ್‌ರನ್ನು ಪೆರ್ಮುದೆ ಪೇಟೆಯಲ್ಲಿ ಇಳಿಸಿ ಪರಾರಿಯಾಗಿತ್ತೆಂದು ದೂರಲಾಗಿದೆ. ಈ ಪ್ರಕರಣದಲ್ಲಿ ಧರ್ಮತ್ತಡ್ಕ ವಳಕುನ್ನು ಚಳ್ಳಂಗಯ ನಿವಾಸಿ ಸಯ್ಯದ್ ಎಸ್.ಎ (28) ಸಹಿತ ನಾಲ್ಕು ಮಂದಿಯನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು. ಇದೀಗ ಸೆರೆಗೀಡಾದ ಯೂಸಫ್ ಇರ್ಶಾದ್ ಈ ಅಪಹರಣ, ಹಣ ಲಪಟಾವಣೆ ಪ್ರಕರಣದ ಸೂತ್ರಧಾರ ನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯದ ವಿವಿಧೆಡೆ ಇದೇ ರೀತಿಯ ಹಲವು ಪ್ರಕರಣಗಳಲ್ಲಿ ಈತ ಆರೋಪಿಯಾಗಿ ದ್ದಾನೆಂದೂ ಪೊಲೀಸರು ತಿಳಿಸಿದ್ದಾರೆ. ಯೂಸಫ್ ಇರ್ಶಾದ್‌ನನ್ನು ಸೆರೆಹಿಡಿದ ತಂಡದಲ್ಲಿ ಎಸ್.ಐ ಪ್ರದೀಪ್ ಕುಮಾರ್ ಜೊತೆಗೆ ಪೊಲೀಸರಾದ ಪ್ರಶಾಂತನ್, ಮನು, ಸತೀಶ್, ಸುಧೀಶ್, ಶ್ರೀಜ, ಮಹೇಶ್, ಚಂದ್ರನ್ ಮೊದಲಾದವರಿದ್ದರು.