256 ಗ್ರಾಂ ಎಂಡಿಎಂಎ ಸಹಿತ ಪೊವ್ವಲ್, ಆಲಂಪಾಡಿ ನಿವಾಸಿಗಳು ಸೆರೆಗೀಡಾದ ಪ್ರಕರಣ: ಮಾದಕವಸ್ತು ಹಸ್ತಾಂತರಿಸಿದ ಮತ್ತೆ ಮೂವರ ಬಂಧನ
ಕಾಸರಗೋಡು: ಕಾರಿನಲ್ಲಿ ಸಾಗಿಸು ತ್ತಿದ್ದ ವೇಳೆ ಪೆರಿಯ ಮುತ್ತನಡ್ಕದಿಂದ 256.02 ಗ್ರಾಂ ಎಂಡಿಎಂಎ ವಶಪಡಿ ಸಿದ ಪ್ರಕರಣದಲ್ಲಿ ಇನ್ನೂ ಮೂವರನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಸೆರೆಗೀಡಾದವರ ಸಂಖ್ಯೆ ಆರಕ್ಕೇರಿದೆ. ಕಣ್ಣೂರು ಕೂತುಪರಂಬ ಅಡಿಯ ರಪಾರ ರಹ್ನಾ ಮಂಜಿಲ್ನ ಕೆ.ಪಿ. ಮುಹಮ್ಮದ್ ಅಜ್ಮಲ್ ಕರೀಂ (20), ಪಾಲಕ್ಕಾಡ್ ಮಣ್ಣಾರ್ ಕಾಡ್ ಕೋಲ್ಪಾಡಂ ತೆಂಗರ ವೆಳ್ಳಾಪುಳ್ಳಿ ವೀಟಿಲ್ನ ವಿ.ಪಿ. ಜಂಶಾದ್ (31), ಕುಂಜಕ್ಕೋಡ್ ತೆಂಗರಪಾಲತ್ ವೀಟಿಲ್ನ ಫಾಯಿಸ್ (26) ಎಂಬಿವರನ್ನು ಬೇಕಲ ಪೊಲೀಸರು ಬೆಂಗಳೂರಿನಿಂದ ಸೆರೆಹಿಡಿದಿದ್ದಾರೆ. ಇವರು ಮಂಗಳವಾರ ರಾತ್ರಿ ಪೆರಿಯ ಮುತ್ತನಡ್ಕದಲ್ಲಿ ಸೆರೆಗೀಡಾದ ಪೊವ್ವಲ್ನ ಮುಹಮ್ಮದ್ ಡ್ಯಾನಿಶ್, ಆಲಂಪಾಡಿ ಯ ಅಬ್ದುಲ್ ಖಾದರ್ ಎಂಬಿವರಿಗೆ ಎಂಡಿಎಂಎ ಮಾರಾಟ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಬ್ದುಲ್ ಖಾದರ್ನನ್ನು ಸಮಗ್ರವಾಗಿ ತನಿಖೆಗೊಳ ಪಡಿಸಿದಾಗ ಈಗ ಸೆರೆಗೀಡಾದ ಮೂವರ ಕುರಿತು ಹಾಗೂ ಗುರುವಾರ ವಯ ನಾಡ್ನಲ್ಲಿ ಸೆರೆಗೀಡಾದ ಕಲ್ಲಿಕೋಟೆ ಕೂಡ ರಂಞಿ ನಿವಾಸಿ ಸಾದಿಖಲಿ (36)ಯ ಕುರಿತು ಮಾಹಿತಿ ಲಭಿಸಿರು ವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಸೆರೆಗೀಡಾದ ಎಲ್ಲಾ ಆರೋಪಿಗಳನ್ನು ಕಸ್ಟಡಿಗೆ ತೆಗೆದು ಸಮಗ್ರ ತನಿಖೆ ನಡೆಸಲು ಪೊಲೀಸರು ತೀರ್ಮಾ ನಿಸಿದ್ದಾರೆ. ಬೇಕಲ ಡಿವೈಎಸ್ಪಿ ವಿ.ವಿ. ಮನೋಜ್ರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಎಂ.ವಿ. ಶ್ರೀದಾಸ್, ಎಸ್ಐ ಎಂ. ಸವ್ಯಸಾಚಿ, ಪ್ರೊಬೆಶನರಿ ಎಸ್ಐಗಳಾದ ಅಖಿಲ್ ಸೆಬಾಸ್ಟಿಯನ್, ಮನುಕೃಷ್ಣನ್, ಡಾನ್ಸಾಪ್ ಸ್ಕ್ವಾಡ್ ಸದಸ್ಯರಾದ ನಿಜಿನ್ ಕುಮಾರ್, ರಜೀಶ್ ಕಾಟಂಬಳ್ಳಿ, ಅನೀಶ್ ಕುಮಾರ್, ಭಕ್ತಶೈವನ್, ಕೆ. ಸುಭಾಶ್ಚಂದ್ರನ್, ಎಂ. ಸಂದೀಪ್, ಮನೋಜ್ ಎಂಬಿವರು ಸೇರಿ ಆರೋಪಿಗಳನ್ನು ಬಂಧಿಸಿದ್ದಾರೆ.