ಮಾದಕಪದಾರ್ಥ ಮಾರಾಟ ಮಾಡಿದ ವ್ಯಸನ ಮುಕ್ತ ಕೇಂದ್ರದ ನೌಕರ ಸೆರೆ
ತೃಶೂರ್: ಮಾದಕವ್ಯಸನಿ ಗಳನ್ನು ಚಿಕಿತ್ಸೆ ನೀಡಿ ಅದರಿಂದ ಮುಕ್ತಗೊಳಿಸುವ ಕೇಂದ್ರದ ನೌಕರ ಮಾದಕಪದಾರ್ಥ ಸಹಿತ ಪೊಲೀ ಸರ ವಶವಾಗಿದ್ದಾನೆ. ತೃಶೂರು ಕೊರಟ್ಟಿ ಚಿತ್ತಾರಿಕ್ಕಲ್ ನಿವಾಸಿ ವಿವೇಕ್ ಶಿವದಾಸ್ ಸೆರೆಯಾದ ವ್ಯಕ್ತಿ. ಪೊಲೀಸ್ ಪಟ್ರೋಲಿಂಗ್ ಮಧ್ಯೆ 4.5 ಗ್ರಾಮ ಮೆಥಾಫೆಟಾ ಮಿನ್ ಸಹಿತ ಈತನನ್ನು ಸೆರೆಹಿಡಿ ಯಲಾಗಿದೆ. ಈತ ಕರುಕುಟ್ಟಿ ಎಂಬ ಲ್ಲಿನ ಖಾಸಗಿ ವ್ಯಸನಮುಕ್ತ ಕೇಂದ್ರದ ನೌಕರನಾಗಿದ್ದಾನೆ. ಸಂಸ್ಥೆಯ ಅಧಿಕಾರಿಗಳು ತಿಳಿಯದಂತೆ ಈತ ಇಲ್ಲಿಗೆ ತಲುಪುವ ಮಾದಕವ್ಯಸನಿ ಗಳಿಗೆ ಮಾದಕ ಪದಾರ್ಥವನ್ನು ಮಾರಾಟ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಂಗಮಾಲಿ ಕೇಂದ್ರೀಕರಿಸಿ ಕಾರ್ಯಾಚರಿಸುವ ಮಾದಕ ಪದಾರ್ಥ ಮಾಫಿಯಾದ ಕೊಂಡಿಯಾಗಿದ್ದಾನೆ ಈತನೆಂದು ಪೊಲೀಸರು ತಿಳಿಸಿದ್ದಾರೆ.