ಯುವಕನನ್ನು ಕಾರಿನಲ್ಲಿ ಅಪಹರಿಸಿದ ಪ್ರಕರಣ : ಪ್ರಧಾನ ಆರೋಪಿ ಸೆರೆ

ಕಾಸರಗೋಡು: ಯುವಕನನ್ನು ಕಾರಿನಲ್ಲಿ ಅಪಹರಿಸಿದ ಪ್ರಕರಣದ ಪ್ರಧಾನ ಆರೋಪಿಯನ್ನು ಮೇಲ್ಪ ರಂಬ ಪೊಲೀಸರು ಬಂಧಿಸಿದ್ದಾರೆ. ಚೆರುವತ್ತೂರು ರೈಲು ನಿಲ್ದಾಣ ಬಳಿ ನಿವಾಸಿ ಸುಹೈಲ್ (28) ಬಂಧಿತ ಆರೋಪಿ. ಕಳೆದ ಅಕ್ಟೋಬರ್ 25ರಂದು ಮಧ್ಯಾಹ್ನ ಕುನ್ನಾರಂ ಸೂಪರ್ ಮಾರ್ಕೆಟ್ ಬಳಿ ನಿಂತಿದ್ದ ಅರ್ಶಾದ್ (27) ಎಂಬವರನ್ನು ಬಲವಂತವಾಗಿ ಕಾರಿಗೇರಿಸಿ ಅಪ ಹರಿಸಿಕೊಂಡು ಹೋಗಿ ಮರುದಿನ ಅವರನ್ನು ವಯನಾಡಿನಲ್ಲಿ ಉಪೇ ಕ್ಷಿಸಿ ಅಪಹರಣಗಾರರು ತಪ್ಪಿಸಿಕೊಂ ಡಿದ್ದರು. ಬಂಧಿತ ಸುಹೈಲ್ ಈ ತಂಡದ ಪ್ರಧಾನ ಆರೋಪಿಯಾಗಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page