ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಅಪಘಾತ : ಕಾರು ಭದ್ರತಾಗೋಡೆಗೆ ಬಡಿದು ನಾಲ್ಕು ಮಂದಿಗೆ ಗಾಯ
ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಕಾರು ಭದ್ರತಾ ಗೋಡೆಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮಹಿಳೆ ಸಹಿತ ನಾಲ್ಕು ಮಂದಿ ಗಾಯ ಗೊಂಡಿದ್ದಾರೆ. ಈ ಪೈಕಿ ಒಬ್ಬ ಸ್ಥಿತಿ ಗಂಭೀರವಾಗಿದ್ದು, ಇದರಿಂದ ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲೂ, ಇತರ ಮೂವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಣ್ಣೂರು ಇರಿಕ್ಕೂರ್ ನಿವಾಸಿಗಳಾದ ಅಬ್ದುಲ್ ನಾಸರ್, ನುಸ್ರತ್, ಅಯ್ಯೂಬ್, ಜಾಫರ್ ಎಂಬಿವರು ಗಾಯಗೊಂಡವರಾಗಿದ್ದಾರೆ. ಈ ಪೈಕಿ ಅಬ್ದಲ್ ನಾಸರ್ರನ್ನು ಮಂಗಳೂರಿನ ಆಸ್ಪತ್ರೆಯಲ್ಲೂ, ಇತರ ಮೂವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇಂದು ಬೆಳಿಗ್ಗೆ 8.30ಕ್ಕೆ ಕುಂಬಳೆ ಬದರ್ ಜುಮಾ ಮಸೀದಿ ಮುಂಭಾಗ ರಸ್ತೆಯಲ್ಲಿ ಅಪಘಾತವುಂಟಾಗಿದೆ. ಕಾರಿನಲ್ಲಿದ್ದವರು ಮಣಿಪಾಲದ ಆಸ್ಪತ್ರೆಗೆ ತೆರಳುತ್ತಿದ್ದರೆನ್ನಲಾಗಿದೆ. ಒಂದು ವಾರ ಹಿಂದೆಯಷ್ಟೇ ಇದೇ ಸ್ಥಳದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಬೇಕಲ ಮವ್ವಲ್ ನಿವಾಸಿಗಳಾದ ಮೂವರು ಗಾಯಗೊಂಡಿದ್ದರು.