ಶೇಣಿಯಲ್ಲಿ ಯುವಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಪೆರ್ಲ: ಶೇಣಿ ಶಾಲೆ ಸಮೀಪ ಯುವಕನನ್ನು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಬಾಡೂರು ಸಂತಡ್ಕದ ದಿ| ರಾಮನಾಯ್ಕ- ಸೀತ ದಂಪತಿ ಪುತ್ರ ಐತ್ತಪ್ಪ (46) ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ ಶೇಣಿ ಶಾಲೆಯ ಸಮೀಪ ಕಾಲನಿಯಲ್ಲಿ ಐತ್ತಪ್ಪರ ಮೃತದೇಹ ಪತ್ತೆಯಾಗಿರುವುದಾಗಿ ಬದಿಯಡ್ಕ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.
ಜುಲೈ 11ರಂದು ರಾತ್ರಿ 10 ಗಂಟೆ ಹಾಗೂ 13ರಂದು ಸಂಜೆಯ ಮಧ್ಯೆ ಇವರ ಸಾವು ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ವಿಷಯ ತಿಳಿದು ತಲುಪಿದ ಪೊಲೀಸರು ಮೃತದೇಹದ ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತರು ಸಹೋದರ ಸಹೋದರಿಯರಾದ ಚಂದ್ರ, ಹರೀಶ್, ಪುಷ್ಪಾ, ಜಯಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.