ಜಿಲ್ಲೆಯಲ್ಲಿ ಕಾಸರಗೋಡು ಅತ್ಯುತ್ತಮ ಪೊಲೀಸ್ ಠಾಣೆ ಅಂಗೀಕಾರ

ಕಾಸರಗೋಡು: ಜಿಲ್ಲೆಯಲ್ಲಿ ಅತ್ಯುತ್ತಮ ಪೊಲೀಸ್ ಠಾಣೆಗಿರುವ ಅಂಗೀಕಾರ ಕಾಸರಗೋಡು ಪೊಲೀಸ್ ಠಾಣೆಗೆ ಲಭಿಸಿದೆ. ೨೦೨೫ ಜೂನ್ ತಿಂಗಳಲ್ಲಿ ವಿವಿಧ ವಲಯಗಳಲ್ಲಾಗಿ ಅತ್ಯುತ್ತಮ ನಿರ್ವಹಣೆ ತೋರಿದ ಪೊಲೀಸ್ ಠಾಣೆಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರು ಸ್ಮರಣಿಕೆ ಮತ್ತು ಸರ್ಟಿ ಫಿಕೆಟ್‌ಗಳನ್ನು ನೀಡಿ ಗೌರವಿಸಿದರು.

ಜಿಲ್ಲೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ ದ್ವಿತೀಯ ಪೊಲೀಸ್ ಠಾಣೆಯಾಗಿ ಬೇಕಲ ಪೊಲೀಸ್ ಠಾಣೆಗೆ ಅಂಗೀಕಾರ ನೀಡಲಾಗಿದೆ. ಕೋಂ ಬಿಂಗ್ ಕಾರ್ಯಾಚರಣೆಯಲ್ಲಿ ಉತ್ತಮ ನಿರ್ವಹಣೆ ತೋರಿದ ಪೊಲೀಸ್ ಠಾಣೆ ಎಂಬ ನಿಟ್ಟಿನಲ್ಲಿ ಬೇಕಲ ಠಾಣೆ ಹಾಗೂ ಎರಡನೇ ಠಾಣೆಯಾಗಿ ಕಾಸರಗೋಡನ್ನು ಆರಿಸಲಾಗಿದೆ.

ಇದರ ಹೊರತಾಗಿ ಅತ್ಯುತ್ತಮ ಪೊಲೀಸ್ ಅಧಿಕಾರಿಯಾಗಿ ಸೇವೆ ನಿರ್ವಹಿಸಿದ ವಿದ್ಯಾನಗರ ಠಾಣೆ ಇನ್ಸ್ ಪೆಕ್ಟರ್ ವಿಪಿನ್ ಯು.ಪಿ., ಚಂದೇರ ಠಾಣೆ ಇನ್ಸ್‌ಪೆಕ್ಟರ್ ಪ್ರಶಾಂತ್ ಎಂ, ಕಾಸರಗೋಡು ಠಾಣೆ ಇನ್ಸ್‌ಪೆಕ್ಟರ್ ನಳಿನಾಕ್ಷನ್ ಪಿ, ಚೀಮೇನಿ ಇನ್ಸ್ ಪೆಕ್ಟರ್ ಅನಿಲ್ ಕುಮಾರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ಅಜಿತ (ಮಹಿಳಾ ಪೊಲೀಸ್ ಠಾಣೆ ಕಾಸರಗೋಡು), ಅನೀಶ್ (ಮೇಲ್ಪರಂಬ ಠಾಣೆ), ವಿಷ್ಣು ಪ್ರಸಾದ್ (ಆದೂರು ಠಾಣೆ), ಶ್ರೀಜೇಶ್ (ಕುಂಬಳೆ ಠಾಣೆ), ಅನ್ಸಾರ್ ಎನ್. (ಕಾಸರಗೋಡು ಠಾಣೆ) ಎಂಬವರನ್ನು ಆರಿಸಿ ಅಭಿನಂದನಾ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.  ಮಾತ್ರವಲ್ಲದೆ ಗ್ರೇಡ್ ಎಎಸ್‌ಐ ಮಧುಸೂದನನ್, ಸೀನಿಯರ್ ಸಿವಿಲ್  ಪೊಲೀಸ್ ಆಫೀಸರ್ ಪ್ರಮೋದ್, ಗ್ರೇಡ್ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಚಂದ್ರಕಾಂತ್, ಎಸ್‌ಎಜಿಒಸಿ ತಂಡದ ಸದಸ್ಯರಾದ ಜ್ಯೋತಿಷ್, ಸುಜಿತ್, ಅಜಿತ್, ಇಆರ್‌ಎಸ್‌ಎಸ್ ಸಂದೇಶ ಕ್ರಮಗಳನ್ನು ಸರಿಯಾಗಿ ನಿರ್ವಹಿಸುವಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಕಂಟ್ರೋಲ್ ರೂಂನ ಗ್ರೇಡ್ ಎಎಸ್‌ಐ ಅಶ್ರಫ್ ಮತ್ತು ಚಾಲಕ ಡ್ಯಾನಿ ಎಂಬವರಿಗೆ ಈ ಆಂಗೀಕಾರ ನೀಡಲಾಗಿದೆ. ಜಿಲ್ಲಾ ಪೊಲೀಸ್ ಅಧಿಕಾರಿಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಸ್ಮರಣಿಕೆ ಮತ್ತು ಅಭಿನಂದನಾ ಪತ್ರ ನೀಡಿ ಗೌರವಿಸಿದರು.

Leave a Reply

Your email address will not be published. Required fields are marked *

You cannot copy content of this page