ಬೈಕ್‌ನಿಂದ ಪೆಟ್ರೋಲ್ ಕಳವು: ಓರ್ವ ಆರೋಪಿ ಸೆರೆ; ಇನ್ನೋರ್ವ ಪರಾರಿ
ಕುಂಬಳೆ: ಕುಂಬಳೆ ರೈಲ್ವೇ ನಿಲ್ದಾಣ ಸಮೀಪ ನಿಲ್ಲಿಸಿದ್ದ ಬೈಕ್‌ನಿಂದ ಪೆಟ್ರೋಲ್ ಕಳವುಗೈದ ಯುವಕನನ್ನು ಬಂಧಿಸಲಾಗಿದೆ. ಮೊಗ್ರಾಲ್ ಬದ್ರಿಯಾನಗರ ಮಸೀದಿ ಬಳಿಯ ನೀರೋಳಿ ಹೌಸ್‌ನ ಕೆ.ಪಿ. ರುಮೈಸ್ (20) ಎಂಬಾತನನ್ನು ಕುಂಬಳೆ ಎಸ್‌ಐ ಪ್ರದೀಪ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಈತನ ಸಹಚರ ಮೇಲ್ಪರಂಬದ ರಿಸ್ವಾನ್ ಓಡಿ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಕಸ್ಟಡಿಗೆ ತೆಗೆದ ರುಮೈಸ್‌ನನ್ನು ಕುಂಬಳೆ ಠಾಣೆಯಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಕುಂಬಳೆಯಲ್ಲಿ ಹೊಸತಾಗಿ ಕರ್ತವ್ಯ ವಹಿಸಿಕೊಂಡ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಕೆ. ವಿಜೀಶ್ ಪೊಲೀಸರ ಸಭೆ ನಡೆಸುತ್ತಿದ್ದ ವೇಳೆ ರುಮೈಸ್ ನಿನ್ನೆ ಮಧ್ಯಾಹ್ನ ಠಾಣೆಯಿಂದ ಓಡಿ ಹೋಗಿದ್ದಾನೆ. ಇದು ಗಮನಕ್ಕೆ ಬಂದ ಎಸ್‌ಐ ಹಾಗೂ ತಂಡ ಆರೋಪಿಯನ್ನು ಬೆನ್ನಟ್ಟಿ ಸೆರೆ ಹಿಡಿದಿದೆ. ಕಳವು ಹೊರತು ಠಾಣೆಯಿಂದ ಓಡಿ ಪರಾರಿಯಾಗಲೆತ್ನಿಸಿದ ಆರೋಪದಂತೆಯೂ ರುಮೈಸ್ ವಿರುದ್ಧ ಮತ್ತೊಂದು ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.