ಅಕ್ಟೋಬರ್ ೩೧ರಂದು ಖಾಸಗಿ ಬಸ್ ಮುಷ್ಕರ
ತಿರುವನಂತಪುರ: ಖಾಸಗಿ ಲಿಮಿ ಟೆಡ್ ಸ್ಟಾಪ್ ಬಸ್‌ಗಳನ್ನು ಆರ್ಡಿನರಿ ಬಸ್‌ಗಳನ್ನಾಗಿ ಪರಿವರ್ತಿಸುವ ಮತ್ತು ಖಾಸಗಿ ಬಸ್‌ಗಳ ಸೇವಾ ಮಿತಿಯನ್ನು ೧೪೦ ಕಿಲೋ ಮೀಟರ್ ಆಗಿ ಸೀಮಿತಗೊಳಿಸುವ ತೀರ್ಮಾ ನವನ್ನು ಪ್ರತಿಭಟಿಸಿ ಹಾಗೂ ವಿದ್ಯಾರ್ಥಿಗಳ ಪ್ರಯಾಣದರ ಹೆಚ್ಚಿಸಬೇಕೆಂಬ ಬೇಡಿಕೆಗಳನ್ನು ಮುಂದಿರಿಸಿಕೊಂಡು ಈತಿಂಗಳ ೩೧ ರಂದು ಖಾಸಗಿ ಬಸ್ ಸೇವೆಯನ್ನು ಮೊಟುಗೊಳಿಸಿ ಮುಷ್ಕರ ಹೂಡಲು ಖಾಸಗಿ ಬಸ್ ಮಾಲಕರ ಸಂಯುಕ್ತ ಸಮಿತಿ ತೀರ್ಮಾನಿಸಿದೆ. ನಮ್ಮ ಬೇಡಿಕೆಗಳನ್ನು ಸರಕಾರ ಅಂಗೀಕರಿಸದಿದ್ದಲ್ಲಿ ನವಂಬರ್ ೨೧ರಿಂದ ಅನಿರ್ಧಿಷ್ಠಾವಧಿ ಮುಷ್ಕರ ಹೂಡಲಾಗುವುದೆಂದು ಸಮಿತಿಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.