ಗಾಳಿ ಮಳೆ: ಕೊಯಿಪ್ಪಾಡಿ, ಕಳ್ಳಿಗೆಯಲ್ಲಿ ಮನೆ ಕುಸಿತ
ಉಪ್ಪಳ: ನಿನ್ನೆ ಸಂಜೆ ಸುರಿದ ಗಾಳಿ ಮಳೆಗೆ ಕೃಷಿಕನ ಮನೆ ಕುಸಿದುಬಿದ್ದು ಭಾರೀ ನಾಶನಷ್ಟ ಸಂಭವಿಸಿದೆ.
ಮೀಂಜ ಪಂಚಾಯತ್ ವ್ಯಾಪ್ತಿಯ ಅರಿಯಾಳ ವಾರ್ಡ್ನ ಕಳ್ಳಿಗೆ ನಿವಾಸಿ ಬಾಬು ರೈ ಎಂಬವರ ಮನೆ ಕುಸಿದು ಬಿದ್ದಿದೆ. ಛಾವಣಿ ಪೂರ್ಣವಾಗಿ ಕುಸಿದು ಬಿದ್ದಿದೆ. ಮನೆಯಲ್ಲಿ ಬಾಬು ರೈ ಹಾಗೂ ಪುತ್ರಿ ಮಾತ್ರವೇ ವಾಸಿಸುತಿ ದ್ದರು. ಶಬ್ದ ಕೇಳಿ ಇವರು ಹೊರಗೆ ಓಡಿದುದರಿಂದ ಅಪಾಯ ತಪ್ಪಿದೆ.
ಇದೇ ವೇಳೆ ಮನೆಯೊಳಗಿರಿಸಿದ್ದ ಅಡಿಕೆ, ಭತ್ತ, ಅಕ್ಕಿ ಸಹಿತ ವಿವಿಧ ಸಾಮಗ್ರಿಗಳು ನೀರಿನಿಂದಾ ವೃತ ಗೊಂಡು ನಾಶಗೊಂಡಿದೆ. ಇದರಿಂದ ಸುಮಾರು ಒಂದೂವರೆ ಲಕ್ಷ ರೂಪಾಯಿಗಳ ನಷ್ಟ ಸಂಭವಿಸಿದೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳೀಯರು ತಲುಪಿ ಸಹಾ ಯವೊದಗಿಸಿದ್ದಾರೆ. ಬಳಿಕ ಬಾಬು ರೈ ಹಾಗೂ ಪುತ್ರಿಯನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಯಿತು.
ಕುಂಬಳೆ: ನಿನ್ನೆ ಬೆಳಿಗ್ಗೆ ಸುರಿದ ಭಾರೀ ಮಳೆ ವೇಳೆ ಕುಂಬಳೆ ಬಳಿಯ ಕೊಯಿಪ್ಪಾಡಿ ಕಡಪ್ಪುರದಲ್ಲಿ ಮನೆಯೊಂದರ ಛಾವಣಿ ಕುಸಿದಿದೆ. ಮನೆಯೊಳಗಿದ್ದ ಯುವತಿ ಹೊರಗೆ ಓಡಿದುದರಿಂದ ಅಪಾಯದಿಂದ ಪಾರಾಗಿದ್ದಾರೆ. ಕಡಪ್ಪುರದ ದಿ| ಅಲೀಮ ಎಂಬವರ ಮನೆಯ ಛಾವಣಿ ಕುಸಿದಿದೆ. ಈ ಮನೆಯಲ್ಲಿ ಈಗ ಅಲೀಮರ ಪುತ್ರಿ ಆಮಿನ (35) ಮಾತ್ರವೇ ವಾಸಿಸುತ್ತಿದ್ದಾರೆ. ಮನೆ ಕುಸಿದ ವಿಷಯ ತಿಳಿದು ಸ್ಥಳೀಯರು ತಲಪಿ ಸಹಾಯವೊದಗಿಸಿದರು.