ಮಜಿಬೈಲ್ ತಿರುವಿನಲ್ಲಿ ಆವರಿಸಿದ ಕಾಡುಪೊದೆ: ಅಪಘಾತ ಭೀತಿ

ಮಂಜೇಶ್ವರ: ಮೀಂಜ ಪಂಜಾಯತ್ ವ್ಯಾಪ್ತಿಯ ಮೀಯಪದವು ರಸ್ತೆಯ ಮಜಿಬೈಲು ಸೇತುವೆ ಸಮೀಪದ ತಿರುವಿನಲ್ಲಿ ಕಾಡು ಪೊದೆಗಳು  ಆವರಿಸಿಕೊಂ ಡಿದ್ದು, ವಾಹನ ಸವಾರರಲ್ಲಿ ಅಪಘಾತ ಭೀತ ಉಂಟಾಗಿದೆ. ಈ ರಸ್ತೆ ಉದ್ದಕ್ಕೂ ಅಲ್ಲಲ್ಲ್ಲಿ ತಿರುವುಗಳಿ ದ್ದು ಇಕ್ಕಡೆಗಳಲ್ಲಿ ಕಾಡುಪೊದೆಗಳು ತುಂಬಿಕೊಂಡಿದೆ. ಸೇತುವೆ ಸಮೀಪ ದೊಡ್ಡ ತಿರುವು ಇದ್ದು ಪೊದೆಗಳು ಆರಿಸಿದ ಕಾರಣ ಮೀಯಪದವು ಭಾಗದಿಂದ ಹೊಸಂಗಡಿಗೂ, ಹೊಸಂಗಡಿ ಭಾಗದಿಂದ ಮೀಯಪದವಿಗೆ ತೆರಳುವ ವಾಹನ ಗಳು ಸವಾರರ ಗಮನಕ್ಕೆ ಬಾರದಿರುವುದು ಅಪಘಾತಕ್ಕೆ ಸಾಧ್ಯತೆ ಹೆಚ್ಚಿಸಿದೆಯೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಸಂಬಂಧಪಟ್ಟ ಪಂಚಾಯತ್ ಅಥವಾ ಸಂಘ-ಸಂಸ್ಥೆಗಳು ರಸ್ತೆ ಬದಿಯಲ್ಲಿ ತುಂಬಿಕೊಂಡಿರುವ ಕಾಡುಪೊದೆಗಳನ್ನು ಕಡಿದು ತೆರವುಗೊಳಿಸಿದರೆ ಸಂಭವಿಸಬಹುದಾದ ಅಪಘಾತವನ್ನು ತಪ್ಪಿಸಬಹುದಾಗಿದೆ.

You cannot copy contents of this page