ಆಟಿ ತಿಂಗಳು ಆರಂಭ: ಮಲೆಯಾಳಿಗರಿಗೆ ರಾಮಾಯಣ ಮಾಸಾಚರಣೆ
ಕಾಸರಗೋಡು: ಇಂದಿನಿಂದ ಆಟಿ ತಿಂ ಗಳು ಆರಂಭಗೊಂಡಿತು. ನಿನ್ನೆ ಸಂಪ್ರ ದಾಯಿಕವಾಗಿ ಸಂಕ್ರಮಣವನ್ನು ಆರಂ ಭಿಸಿ ನಾಡಿನಲ್ಲಿ ದೈವಸ್ಥಾನಗಳ ಬಾಗಿಲು ಮುಚ್ಚಲಾಯಿತು. ಇನ್ನು ಒಂದು ತಿಂಗಳ ಕಾಲ ಕಲ್ಲುರ್ಟಿ, ಗುಳಿಗ ದೈವ ಗಳ ಸೇವೆ ಮಾತ್ರವೇ ನಡೆಯುತ್ತದೆ.
ಈ ತಿಂಗಳಲ್ಲಿ ಬೇರೆಯಾವ ದೈವಗಳಿಗೂ ಆರಾಧನೆ ನಡೆಯುವುದಿಲ್ಲ. ಇದರಿಂದಾಗಿ ಹೆಚ್ಚಿನ ದೈವಸ್ಥಾನಗಳ ಬಾಗಿಲು ಮುಚ್ಚಿ ಮುಂದಿನ ಸೋಣ ಸಂಕ್ರಾಂತಿ ದಿನದಂದು ಬಾಗಿಲು ತೆರೆಯಲಾಗುತ್ತದೆ. ಆಟಿಗೆ ಕಳೆಯೇರಿಸಲು ಮಾಂತ್ರಿಕ ಶಕ್ತಿಯಾದ ಆಟಿಕಳೆಂಜನು ತುಳುನಾಡಿನ ಮನೆಗಳಿಗೆ ಭೇಟಿ ನೀಡುವ ಕ್ರಮವಿದೆ. ಇದೇ ವೇಳೆ ಕೇರಳದಲ್ಲಿ ಈ ತಿಂಗಳನ್ನು ರಾಮಾಯಣ ಮಾಸಾಚರಣೆಯಾಗಿ ಆಚರಿಸಲಾಗುತ್ತಿದೆ. ನಾಡಿನಾದ್ಯಂತ ದೇವಸ್ಥಾನಗಳಲ್ಲಿ ಹಾಗೂ ಮನೆಗಳಲ್ಲಿ ಸಂಜೆ ಹೊತ್ತು ರಾಮಾಯಣ ಪಾರಾಯಣ ಕೇಳಿಬರುವುದು.