ಕುಂಬಳೆ: ತೀವ್ರ ಮಳೆ ಮುಂದುವರಿಯುತ್ತಿರುವಂತೆಯೇ ಬಂಬ್ರಾಣ ಬಯಲು ಜಲಾವೃತಗೊಂಡಿದೆ. ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ಈ ಪ್ರದೇಶದಲ್ಲಿ ಪೂರ್ಣವಾಗಿ ನೀರು ತುಂಬಿಕೊಂಡಿದೆ. ಶಿರಿಯ ಹೊಳೆಯಲ್ಲಿ ನೀರು ಉಕ್ಕಿ ಹರಿದ ಪರಿಣಾಮ ಬಂಬ್ರಾಣ ಬಯಲು ಹಾಗೂ ಆ ಪ್ರದೇಶದ ರಸ್ತೆ ನೀರಿನಿಂದಾವೃತಗೊಂಡಿದೆ. ಮನೆಯೊಳಗೂ ನೀರು ನುಗ್ಗಿದ್ದು, ಇದರಿಂದ ವಾಸಿಸಲು ಸಾಧ್ಯವಿಲ್ಲದಂತಾಗಿದೆ. ಅಗ್ನಿಶಾಮ ಕದಳದ ರೆಸ್ಕ್ಯೂ ಟೀಂ ತಲುಪಿ ನಾಗರಿಕರ ಸಹಾಯದೊಂದಿಗೆ ರಕ್ಷಣಾ ಕಾರ್ಯಾಚರಣೆಗೆ ನೇತೃತ್ವ ನೀಡಿದೆ. ಈಗಾಗಲೇ 30 ಕುಟುಂಬ ಗಳನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಮಳೆ ಇನ್ನೂ ತೀವ್ರಗೊಂಡಲ್ಲಿ ಇನ್ನಷ್ಟು ಕುಟುಂ ಬಗಳು ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ಉಂಟಾಗಿದೆ.
