ಕರ್ನಾಟಕದ ಕಾರ್ಮಿಕ ನಾಪತ್ತೆ: ಹೊಳೆ ನೀರಿನಲ್ಲಿ ಸೆಳೆತಕ್ಕೊಳಗಾಗಿರಬಹುದೆಂಬ ಶಂಕೆ

ಕಾಸರಗೋಡು: ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಕರ್ನಾಟಕ ನಿವಾಸಿ ವಲಸೆ ಕಾರ್ಮಿಕ ನೋರ್ವ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

ಜೆಸಿಬಿ ವಾಹನದ ಸಹಾಯಕನಾಗಿ ಕರ್ನಾಟಕ ಬೆಳಗಾವಿ ನಿವಾಸಿ ದುರ್ಗಪ್ಪ (ಅನಿಲ್-18) ನಾಪತ್ತೆಯಾದ ಕಾರ್ಮಿಕ. ತೋಟಗಾರಿಕಾ ನಿಗಮದ ಪಾಣತ್ತೂರಿನಲ್ಲಿರುವ ಸ್ಥಳದಲ್ಲಿ  ಅನನಾಸು ಕೃಷಿ ನಡೆಸಲು ಅಲ್ಲಿನ  ನೆಲವನ್ನು ಸಮತಟ್ಟುಗೊಳಿಸಲು ಬಂದ ಜೆಸಿಬಿ ವಾಹನದ ಸಹಾಯಕನಾಗಿ ದುರ್ಗಪ್ಪ ನಿನ್ನೆ ಬಂದಿದ್ದನು. ಮಧ್ಯಾಹ್ನ ಊಟದ ಬಳಿಕ ಆತ ದಿಢೀರ್ ನಾಪತ್ತೆಯಾಗಿದ್ದಾನೆ. ಆ ಬಗ್ಗೆ ಜೆಸಿಬಿ  ಚಾಲಕ ಕರ್ನಾಟಕ ಕೊಡಗು ನಿವಾಸಿ  ಯುವಾನಂದ ನೀಡಿದ ದೂರಿನಂತೆ ರಾಜಪುರಂ ಪೊಲೀಸರು ಪ್ರಕರಣ ದಾಖಲಿ ಸಿಕೊಂಡು ಶೋಧ ಆರಂಭಿಸಿದಾಗ ದುರ್ಗಪ್ಪನ ಬೈಕ್ ಮತ್ತು ತಿನ್ನಲು ತಂದಿದ್ದ ಚಪಾತಿ ಪಾಣತ್ತೂರು ಮಂಞತ್ತಡ್ಕ ಹೊಳೆ ಬಳಿ ಪತ್ತೆ ಯಾಗಿದೆ.  ಇದರಿಂದಾಗಿ ದುರ್ಗಪ್ಪ ಹೊಳೆ ನೀರಿನ ಸೆಳೆತಕ್ಕೊಳಗಾಗಿ ರಬಹುದೆಂಬ ಶಂಕೆ ಉಂಟಾಗಿದೆ. ವಿಷಯ ತಿಳಿದ ಕುತ್ತಿಕ್ಕೋಲ್ ಅಗ್ನಿಶಾಮಕದಳ, ಪೊಲೀಸರು ಮತ್ತು ಊರವರು ವ್ಯಾಪಕ ಶೋಧ ನಡೆಸಿದರೂ ದುರ್ಗಪ್ಪನನ್ನು ಪತ್ತೆಹ ಚ್ಚಲು ಈತನಕ ಸಾಧ್ಯವಾಗಲಿಲ್ಲ. ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದೆ.

Leave a Reply

Your email address will not be published. Required fields are marked *

You cannot copy content of this page