ಅಚ್ಯುತಾನಂದನ್ ನಿಧನ : ಬಾಯಾರಿನಲ್ಲಿ ಸಂತಾಪ ಸೂಚಕ ಸಭೆ
ಪೈವಳಿಕೆ: ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್‌ರ ನಿಧನಕ್ಕೆ ಸಿಪಿಎಂ ಬಾಯಾರು ಲೋಕಲ್ ಸಮಿತಿ ನೇತೃತ್ವದಲ್ಲಿ ಸಂತಾಪ ಸೂಚಕ ಸಭೆ ನಡೆಯಿತು. ಸಿಪಿಎಂ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಆರ್. ಜಯಾನಂದ, ಕಾಂಗ್ರೆಸ್ ಮುಖಂಡ ವಸಂತ, ಬಿಜೆಪಿಯ ಸುಬ್ರಹ್ಮಣ್ಯ ಭಟ್, ಮುಸ್ಲಿಂ ಲೀಗ್‌ನ ಇಬ್ರಾಹಿಂ ಬಾಯಾರು, ಮೋನಪ್ಪ ಶೆಟ್ಟಿ, ಅಬ್ದುಲ್ ಗಾಳಿಯಡ್ಕ, ರಾಮಚಂದ್ರ, ಅಬ್ದುಲ್ ಸತ್ತಾರ್ ಮಾತನಾಡಿದರು. ಏರಿಯಾ ಸಮಿತಿ ಸದಸ್ಯ ವಿನಯ ಕುಮಾರ್ ಅಧ್ಯಕ್ಷತೆ ವಹಿಸಿದರು. ಲೋಕಲ್ ಕಾರ್ಯದರ್ಶಿ ಪುರುಷೋತ್ತಮ ಬಳ್ಳೂರು ಸ್ವಾಗತಿಸಿದರು.