ತೀಯಾ ಮಹಾಸಭಾ ಜಿಲ್ಲಾ ಸಮ್ಮೇಳನ ನಾಳೆ

ಕಾಸರಗೋಡು: ತೀಯಾ ಮಹಾಸಭಾ ಜಿಲ್ಲಾ ಸಮ್ಮೇಳನ ‘ಆರೂಢಂ ೨೦೨೫’ ಹಾಗೂ ಪ್ರಥಮ ಆದಿ ದಿವ್ಯನ್ ಪ್ರಶಸ್ತಿ ಪ್ರದಾನ ಸಮಾರಂಭ ನಾಳೆ ವಿದ್ಯಾನಗರ ಬಳಿಯ ಉದಯಗಿರಿ ಶ್ರೀಹರಿ ಆಡಿಟೋರಿ ಯಂನಲ್ಲಿ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಲೇಖಕ ಪದ್ಮಶ್ರೀ ಬಾಲನ್ ಪೂತೇರಿ ಮಲಪ್ಪುರ ಉದ್ಘಾಟಿಸುವರು. ತಳಂಗರೆ ಶ್ರೀ ಚೀರುಂಬಾ ಭಗವತೀ  ದೇವಸ್ಥಾನದ ಆಚಾರಸ್ಥಾನಿಕ ನಾಗೇಶ್ ಕಾರ್ನವರ್, ಪಿಲಿಕುಂಜೆ ಶ್ರೀ ಐವರ್ ಭಗವತೀ ದೇವಸ್ಥಾನದ ಆಚಾರ ಸ್ಥಾನಿಕ ಮಂಜು ಕಾರ್ನವರ್ ದೀಪ ಪ್ರಜ್ವಲನೆ ನಡೆಸುವರು. ತೀಯಾ ಮಹಾಸಭಾ ಜಿಲ್ಲಾಧ್ಯಕ್ಷ ಪಿ.ಸಿ. ವಿಶ್ವಂಭರನ್ ಪಣಿಕ್ಕರ್ ಅಧ್ಯಕ್ಷತೆ ವಹಿಸುವರು. ರಾಜ್ಯಾಧ್ಯಕ್ಷ ಗಣೇಶ್ ಅರಮಂಗಾನ ಪ್ರಧಾನ ಭಾಷಣ ನಡೆಸುವರು.  ಉತ್ತರ ಮಲಬಾರ್ ತೀಯಾ ಸಮುದಾಯ ಕ್ಷೇತ್ರ ಸಂರಕ್ಷಣಾ ಸಮಿತಿ ಅಧ್ಯಕ್ಷ ಸಿ. ರಾಜನ್ ಪೆರಿಯ ಮುಖ್ಯ ಅತಿಥಿಯಾ ಗಿರುವರು. 66 ವರ್ಷಗಳಿಂದ ಆಚಾರ ಸ್ಥಾನಿಕರಾಗಿ ಸೇವೆ ಸಲ್ಲಿಸುತ್ತಿರುವ ಕೃಷ್ಣನ್ ಕಾರ್ನವರ್ (ಅಡ್ಕ ಭಗವತೀ ಕ್ಷೇತ್ರ) ಸಹಿತ ಹಲವು ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.

You cannot copy contents of this page