ಕೊಯಿನಾಡು ಭೀಕರ ಅಪಘಾತ : ಉಳ್ಳಾಲದಿಂದ ತೆರಳುತ್ತಿದ್ದ 4 ಮಂದಿ ಮೃತ್ಯು
ಸುಳ್ಯ: ಉಳ್ಳಾಲದಿಂದ ಕಾರಿನಲ್ಲಿ ತೆರಳುತ್ತಿದ್ದ ನಾಲ್ಕು ಮಂದಿ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಲಾರಿ ಹಾಗೂ ಇವರು ಸಂಚರಿಸಿದ ಕಾರು ನಡುವೆ ಢಿಕ್ಕಿ ಸಂಭವಿಸಿ ಅಪಘಾತ ಉಂಟಾಗಿದೆ. ಮಡಿಕೇರಿ ಕೊಯನಾಡುನಲ್ಲಿ ಅಪಘಾತ ಸಂಭವಿಸಿದೆ. ಗೋಣಿಕೊಪ್ಪ ಹುಣಸೂರಿನ ನಿಹಾದ್, ರಿಸ್ವಾನ್, ರಾಶಿಬ್, ರಿಷು ಎಂಬಿವರು ಮೃತಪಟ್ಟವರು. ಢಿಕ್ಕಿಯಾಘಾತಕ್ಕೆ ಕಾಲು ಸಂಪೂರ್ಣ ನಜ್ಜುಗುಜ್ಜಾಗಿದೆ.
ಈ ಅಪಘಾತದ ಬಗ್ಗೆ ತಿಳಿದು ಸ್ಥಳಕ್ಕೆ ತಲುಪಿದ್ದ ಕುಟುಂಬ ಸದಸ್ಯರ ಕಾರಿಗೆ ಲಾರಿ ಢಿಕ್ಕಿ ಹೊಡೆದು ಕಾರಿನ ಮುಂಭಾಗ ಜಖಂ ಗೊಂಡಿದೆ. ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಾಗದ ಕಾರಣ ಮಡಿಕೇರಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ಆಂಬುಲೆನ್ಸ್‌ನ ಹಿಂಬದಿಯಲ್ಲಿ ಸಂಚರಿಸುತ್ತಿದ್ದ ಕಾರಿಗೆ ಲಾರಿ ಢಿಕ್ಕಿ ಹೊಡೆದಿದೆ.