ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಜಿಲ್ಲಾ ಸಮಿತಿಯಿಂದ ಚಿತ್ರರಚನೆ ಸ್ಪರ್ಧೆ
ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇ ಶನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಮಟ್ಟದ ಚಿತ್ರರಚನೆ ಸ್ಪರ್ಧೆ ನಡೆಸಲಾಯಿತು. ಎ.ಕೆ.ಪಿ.ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್.ಪಿ., ಯು.ಪಿ. ವಿಭಾಗದ ಹಲವು ವಿದ್ಯಾರ್ಥಿಗಳು ಭಾಗವಹಿಸಿದರು. ಜಿಲ್ಲಾ ಅಧ್ಯಕ್ಷ ಸುಗುಣನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದು, ರಾಜ್ಯ ಕಾರ್ಯದರ್ಶಿ ಹರೀಶ್ ಉದ್ಘಾಟಿಸಿದರು. ರಾಜೇಂದ್ರನ್ ಸ್ವಾಗತಿಸಿ, ಪ್ರಜೀತ್ ಎನ್.ಕೆ. ವಂದಿಸಿದರು. ಸುಧೀರ್ ಕೆ., ಶರೀಫ್, ರಮೇಶನ್, ಪ್ರಜೀಶ್, ಸುರೇಶ್ ಬಿ.ಜೆ, ಸನ್ನಿ ಜೇಕಬ್, ಮನು, ಮನೀಶ್, ಶ್ರೀಕಾಂತ್ ಶುಭ ಹಾರೈಸಿದರು. ಎಲ್.ಪಿ. ವಿಭಾಗ ಸ್ಪರ್ಧೆಯಲ್ಲಿ ದುರ್ಗಾಪ್ರಸಾದ್ ಶೆಟ್ಟಿ ಕುಂಬಳೆ ಪ್ರಥಮ ಸ್ಥಾನ, ಆದ್ವಿಕ್ ಸಚಿನ್ ಮನ್ನಿಪ್ಪಾಡಿ ದ್ವಿತೀಯ, ಯು.ಪಿ. ವಿಭಾಗದಲ್ಲಿ ಅಭಿಷೇಕ್ ಕಾಸರಗೋಡು ಪ್ರಥಮ, ಗೌತಮ್ ರಮೇಶ್ ಮಾವುಂಗಾಲ್, ಪೃಥ್ವಿ ಮೀಪುಗುರಿ ದ್ವಿತೀಯ ಸ್ಥಾನ ಪಡೆದರು.