ಕುಂಬಳೆ ಬಿಜೆಪಿಯ ಸುಳ್ಳು ಆರೋಪಗಳು ಕಸದ ಬುಟ್ಟಿಗೆ- ಐಕ್ಯರಂಗ ಮುಖಂಡರು
ಕುಂಬಳೆ: ಸ್ಥಳೀಯಾಡಳಿತ ಸಂಸ್ಥೆ ಗಳಿಗಿರುವ ಚುನಾವಣೆ ಸನ್ನಿಹಿತವಾಗು ತ್ತಿದ್ದಂತೆ ಕುಂಬಳೆ ಪಂಚಾಯತ್‌ನ ಆಡಳಿತ ಸಮಿತಿ ವಿರುದ್ಧ ಬಿಜೆಪಿ ಹುರುಳಿಲ್ಲದ ಆರೋಪಗಳನ್ನು ಮುಂದಿಟ್ಟಿರುವುದಾಗಿ ಐಕ್ಯರಂಗದ ಕುಂಬಳೆ ಪಂಚಾಯತ್ ಮುಖಂಡರಾದ ಬಿ.ಎನ್. ಮೊಹಮ್ಮದಾಲಿ, ರವಿ ಪೂಜಾರಿ, ಯೂಸಫ್ ಉಳುವಾರ್ ಎಂಬಿವರು ಹೇಳಿಕೆಯಲ್ಲಿ ಆರೋಪಿಸಿ ದ್ದಾರೆ. ಪಂಚಾಯತ್ ಕಾರ್ಯದರ್ಶಿ ಬಾಹೂ ಬಿಜೆಪಿ ಜಂಟಿಯಾಗಿ ನಡೆಸಿದ ಗೂಢಾಲೋಚನೆ ಯಂಗವಾಗಿ ಅವಿಶ್ವಾಸ ಗೊತ್ತುವಳಿಯಾಗಿದ್ದು, ಸರ ಕಾರಿ ಅಧಿಕಾರಿಯಾಗಿರುವ ಕಾರ್ಯ ದರ್ಶಿ ರಾಜಕೀಯ ಪಕ್ಷಕ್ಕೆ ಬೇಕಾಗಿ ಕಾರ್ಯಾಚರಿಸುತ್ತಿರುವುದಾ ಗಿಯೂ, ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕೆಂದು ಮುಖಂಡರು ಆಗ್ರಹಿಸಿದರು. ಸುಳ್ಳು ಆರೋಪಗಳು ಯಾವುದೇ ಕಾರಣಕ್ಕೂ ಉಳಿಯದೆಂದು, ಜನಪರ ಕಾರ್ಯಗಳೊಂದಿಗೆ ಆಡಳಿತ ಸಮಿತಿ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.