ರಾಜ್ಯದಲ್ಲಿ ಬೆಲೆಯೇರಿಕೆ ಪಿಣರಾಯಿ ವಿಜಯನ್ ಸರಕಾರ ನಿರ್ಮಿಸಿದ ದುರಂತ- ಎಂ.ಎಲ್. ಅಶ್ವಿನಿ

ಕಾಸರಗೋಡು: ಕೇರಳದಲ್ಲಿ ಉಂಟಾಗಿರುವ ಬೆಲೆಯೇರಿಕೆ ಪಿಣರಾಯಿ ವಿಜಯನ್ ಸರಕಾರ ನಿರ್ಮಿಸಿದ ದುರಂತವೆಂದು ಇದರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸರಕಾರಕ್ಕೆ ಅವಕಾಶ ನೀಡುವುದಿಲ್ಲ ವೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು.

ಅಗತ್ಯ ಸಾಮಗ್ರಿಗಳ ಬೆಲೆಯೇರಿಕೆಯನ್ನು ಪ್ರತಿಭಟಿಸಿ ಮಹಿಳಾಮೋರ್ಚಾ ತಾಲೂಕು ಸಮಿತಿ ಮುಂಭಾಗ ನಡೆಸಿದ ಗಂಜಿ ಸಿದ್ಧಪಡಿಸಿ ಪ್ರತಿಭಟನೆಯನ್ನು ಅವರು ಉದ್ಘಾಟಿಸಿ ಮಾತನಾಡುತ್ತಿದ್ದರು. 2016ರಲ್ಲಿ ಅಧಿಕಾರಕ್ಕೇರುವಾಗ ಇನ್ನು ಬೆಲೆಯೇರಿಕೆ ಉಂಟಾಗದೆಂದು ಘೋಷಿಸಿದ್ದ ಪಿಣರಾಯಿ ವಿಜಯನ್‌ರ ಆಡಳಿತದಲ್ಲಿ ಅಗತ್ಯ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಇದೇ ವೇಳೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಸರಕಾರ ಹಲವಾರು ಜನಪ್ರಿಯ ಯೋಜನೆಗಳನ್ನು ಜ್ಯಾರಿಗೊಳಿಸಿರುವುದಾಗಿಯೂ ಮಹಿಳೆಯರ ಬದುಕಿನ ಮಟ್ಟವನ್ನು ಉತ್ತಮಪಡಿಸಿರುವುದಾಗಿಯೂ ಅವರು ಅಭಿಪ್ರಾಯಪಟ್ಟರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಗೋಪಾಲನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಸವಿತಾ ಟೀಚರ್, ವೀಣಾ ಅರವಿಂದ್ ಶೆಟ್ಟಿ, ಸೌಮ್ಯಾ, ರಮಣಿ ಮಾತನಾಡಿದರು. ಬಿಜೆಪಿ ಮುಖಂಡರು, ಕಾರ್ಯಕರ್ತರು, ಜನಪ್ರತಿನಿಧಿಗಳು ಭಾಗವಹಿಸಿದರು.

RELATED NEWS

You cannot copy contents of this page