ಕುಂಬಳೆ: ಕುಂಬಳೆಯಲ್ಲಿ ಬೀದಿ ನಾಯಿಗಳ ಉಪಟಳ ತೀವ್ರಗೊಂ ಡಿದ್ದು ಇದರಿಂದ ಶಾಲಾ ವಿದ್ಯಾರ್ಥಿ ಗಳ ಸಹಿತ ಜನರಿಗೆ ನಡೆದಾಡಲಾಗದ ಸ್ಥಿತಿ ಉಂಟಾಗಿದೆ. ಬೀದಿ ನಾಯಿ ಗಳಿಂದ ಸಮಸ್ಯೆ ತೀವ್ರಗೊಂಡರೂ ಸಂಬಂಧಪಟ್ಟ ಅಧಿಕಾರಿಗಳ್ಯಾರೂ ಅತ್ತ ಗಮನ ಹರಿಸುತ್ತಿಲ್ಲವೆಂದು ನಾಗರಿಕರು ದೂರುತ್ತಿದ್ದಾರೆ. ಬೀದಿ ನಾಯಿಗಳ ಉಪಟಳ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದೂ ನಾಗರಿಕರು ದೂರುತ್ತಿದ್ದಾರೆ.
ಕುಂಬಳೆ ಪಂಚಾಯತ್ ಕಚೇರಿ, ಪೊಲೀಸ್ ಠಾಣೆ ಪರಿಸರ ಹಾಗೂ ಶಾಲಾ ಮೈದಾನ ಕೇಂದ್ರೀಕರಿಸಿ ಬೀದಿ ನಾಯಿಗಳು ಅಲೆದಾಡುತ್ತಿವೆ. ಇದರಿಂದ ಅತೀ ಹೆಚ್ಚು ಆತಂಕ ಎದುರಾಗುತ್ತಿರುವುದು ವಿದ್ಯಾರ್ಥಿಗಳಿಗಾಗಿದೆ. ರಸ್ತೆಯಲ್ಲಿ ಹಿಂಡಾಗಿ ನಿಂತಿರುವ ಬೀದಿ ನಾಯಿಗಳು ಶಾಲಾ ವಿದ್ಯಾರ್ಥಿಗಳ ಮೇಲೆ ದಾಳಿಗೆ ಮುಂದಾಗುತ್ತಿವೆ. ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಹಲವು ವಿದ್ಯಾರ್ಥಿಗಳು ಬಿದ್ದು ಗಾಯಗೊಂಡ ಘಟನೆಯೂ ನಡೆದಿದೆ. ಇದರಿಂದ ಸಣ್ಣ ಮಕ್ಕಳನ್ನು ಹೆತ್ತವರೇ ಶಾಲೆ ವರೆಗೆ ತಲುಪಿಸಬೇಕಾದ ಪರಿಸ್ಥಿತಿ ಎದುರಾಗಿದೆ. ನಾಯಿಗಳ ಬೆದರಿಕೆ ತಪ್ಪಿಸಲು ಸಂಜೆ ವೇಳೆ ಅಧ್ಯಾಪಕ-ಅಧ್ಯಾಪಿಕೆಯರು ಮಕ್ಕಳನ್ನು ಬಸ್ ನಿಲ್ದಾಣವರೆಗೆ ತಲುಪಿಸಬೇಕಾಗುತ್ತಿದೆ. ಬೀದಿ ನಾಯಿಗಳ ಉಪಟಳ ಇದೇ ರೀತಿ ಮುಂದುವರಿದರೆ ಮುಂದೆ ಭಾರೀ ಆಪತ್ತು ಎದುರಾಗಲಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ. ಈಗಾಗಲೇ ಈ ಭಾಗದಲ್ಲಿ ಆಡುಗಳು ಹಾಗೂ ಕೋಳಿಗಳನ್ನು ಬೀದಿ ನಾಯಿಗಳು ಹಿಡಿದು ತಿಂದ ಘಟನೆಯೂ ನಡೆದಿದೆ. ಇದೆಲ್ಲವನ್ನು ತಿಳಿದರೂ ಪಂಚಾ ಯತ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀ ಯವೆಂದು ನಾಗರಿಕರು ತಿಳಿಸುತ್ತಿದಾರೆ.