ಸರಕಾರಿ ಶಾಲೆಗಳಲ್ಲಿ ಸ್ಥಳೀಯಾಡಳಿತ ಇಲಾಖೆಯ ಪರಿಶೀಲನೆ: 100 ಶಾಲಾ ಕಟ್ಟಡಗಳನ್ನು ಕೆಡವಲು ಶಿಫಾರಸ್ಸು
ಕಾಸರಗೋಡು: ಸರಕಾರಿ ಶಾಲೆಗಳ ಸುದೃಢತೆಗಳ ಬಗ್ಗೆ ಸ್ಥಳೀಯಾಡಳಿತ ಇಲಾಖೆ ನೇರವಾಗಿ ಪರಿಶೀಲನೆ ಆರಂಭಿಸಿದ್ದು, ಇದರಂತೆ ಈತನಕ ನಡೆಸಿದ ಪರಿಶೀಲನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಾಗಿ ನೂರರಷ್ಟು ಶಾಲಾ ಕಟ್ಟಡಗಳು ಅನ್‌ಫಿಟ್ ಆಗಿದ್ದು ಆ ಹಿನ್ನೆಲೆಯಲ್ಲಿ ಅವುಗಳನ್ನು ಕೆಡಹುವಂತೆ ಸರಕಾರಕ್ಕೆ ವರದಿ ಸಲ್ಲಿಸಿದೆ.
ಸ್ಥಳೀಯಾಡಳಿತ ಖಾತೆಯ ಕಟ್ಟಡ ನಿರ್ಮಾಣ ವಿಭಾಗದ ಇಂಜಿನಿಯರ್ ಗಳ ತಂಡಗಳು ಶಾಲೆಗಳ ದೃಢತೆಯ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಅನನು ದಾನಿತ ಕಟ್ಟಡಗಳ ಸುದೃಢ ತೆಯ ಬಗ್ಗೆಯೂ ಸ್ಥಳೀಯಾಡಳಿತ ಸಂಸ್ಥೆ ಪರಿಶೀಲನೆ ನಡೆಸುತ್ತಿದೆ. ಅದು ಮುಗಿದಲ್ಲಿ ರಾಜ್ಯದಲ್ಲಿ ಅನ್ ಫಿಟ್ ಶಾಲೆಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಸುದೃಢವಲ್ಲವೆಂದು ಗುರುತಿ ಸಿರುವ ಹೆಚ್ಚಿನ ಶಾಲೆಗಳು ಹೆಂಚು ಹಾಸಿದ ಕಟ್ಟಡಗಳಾಗಿವೆ. ಅನ್‌ಫಿಟ್ ಎಂದು ಪತ್ತೆಹಚ್ಚಲಾದ ಶಾಲಾ ಕಟ್ಟಡಗಳನ್ನು ಕೆಡಹಿ ಅದರ ಬದಲು ಹೊಸ ಕಟ್ಟಡ ನಿರ್ಮಿಸ ಬೇಕಾದ ಹೊಣೆಗಾರಿಕೆಯನ್ನು ಸ್ಥಳೀಯಾ ಡಳಿತ ಇಲಾಖೆ ಹೊಂದಿದೆ. ಆದರೆ ಅನನುದಾನಿತ ಶಾಲಾ ಕಟ್ಟಡಗಳನ್ನು ಆಯಾ ಶಾಲೆಗಳ ಆಡಳಿತ ಸಮಿತಿಗಳೇ ನಿರ್ಮಿಸಬೇಕಾಗಿದೆ.