ಶಬರಿಮಲೆಗೆ ತೆರಳುತ್ತಿದ್ದ ಕಾರಿಗೆ ಬೆಂಕಿ: ಪ್ರಯಾಣಿಕರು ಪಾರು
ಪತ್ತನಂತಿಟ್ಟ: ಶಬರಿಮಲೆಗೆ ತೆರಳುತ್ತಿದ್ದವರು ಸಂಚರಿಸುತ್ತಿದ್ದ ಕಾರಿಗೆ ಬೆಂಕಿ ತಗಲಿದೆ. ಕಾರಿನಲ್ಲಿದ್ದ ಆರು ಮಂದಿ ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ಪಾಲಕ್ಕಾಡ್ ನಿವಾಸಿಗಳು ಸಂಚರಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗಲಿದೆ. ಪಂಪಾಕ್ಕಿರುವ ಪ್ರಯಾಣ ಮಧ್ಯೆ ಈ ದುರಂತ ಸಂಭವಿಸಿದೆ. ಬೆಂಕಿ ತಗಲಿರುವುದು ತಿಳಿದ ಪ್ರಯಾಣಿಕರು ಕಾರನ್ನು ನಿಲ್ಲಿಸಿ ಇಳಿದು ಓಡಿದರು. ಕೂಡಲೇ ಮಾಹಿತಿ ತಿಳಿದು ಅಗ್ನಿಶಾಮಕ ದಳ ತಲುಪಿ ಬೆಂಕಿ ನಂದಿಸಿದೆ. ಇಂದು ಬೆಳಿಗ್ಗೆ ಶಬರಿಮಲೆಯಲ್ಲಿ ನಡೆದ ಹುತ್ತರಿ ಆಚರಣೆಯಲ್ಲಿ ಭಾಗವಹಿಸರು ಕಾರಿನಲ್ಲಿದ್ದವರು ತೆರಳುತ್ತಿದ್ದರು.