ತುಳು ಅಕಾಡೆಮಿಯಿಂದ ಪೈವಳಿಕೆಯಲ್ಲಿ ಆಟಿದ ಕೂಟ 10ರಂದು: ಸ್ವಾಗತ ಸಮಿತಿ ರೂಪೀಕರಣ
ಪೈವಳಿಕೆ: ಕೇರಳ ತುಳು ಅಕಾಡೆಮಿ ವತಿಯಿಂದ ತಾರೀಕು ಆ.10ರಂದು ಪೈವಳಿಕೆಯಲ್ಲಿ ಆಟಿ ತಿಂಗಳ ಪ್ರಯುಕ್ತ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ. ಇದರ ಯಶಸ್ವಿ ಗಾಗಿ ಪೈವಳಿಕೆ ಪಂ.ನ ಕುಟುಂಬಶ್ರೀ ಹಾಲ್‌ನಲ್ಲಿ ಸ್ವಾಗತ ಸಂಘ ರೂಪೀ ಕರಣ ಸಭೆ ನಡೆಯಿತು. ಅಕಾಡೆಮಿ ಅಧ್ಯಕ್ಷ ಕೆ. ಆರ್. ಜಯಾನಂದ ಅದ್ಯಕ್ಷತೆ ವಹಿಸಿದರು. ವಿವಿಧ ಸಮಿತಿಗಳನ್ನು ರಚಿಸಲಾಯಿತು. ಸ್ವಾಗತ ಸಂಘದ ಅಧ್ಯಕ್ಷರಾಗಿ ಪೈವಳಿಕೆ ಪಂ.ನ ಅಧ್ಯಕೆÀ್ಷ ಜಯಂತಿ ಕೆ., ಉಪಾಧ್ಯಕ್ಷರಾಗಿ ವಸಂತ ಮಾಸ್ತರ್, ಸುನೀತಾ ವಾಲ್ಟಿ ಡಿಸೋಜಾ, ಸುಜಾತಾ ಬಿ ರೈ, ಹುಸೇನ್ ಮಾಸ್ಟರ್, ಸಂಚಾಲಕರಾಗಿ ಅಜಿತ್ ಎಂ.ಸಿ ಲಾಲ್ ಬಾಗ್, ಜೆÆತೆ ಸಂಚಾಲಕರಾಗಿ ಚಂದ್ರ ನಾಯ್ಕ್, ಅಶೋಕ್ ಭಂಡಾರಿ, ಚನಿಯ ಕೊಮ್ಮಂ ಗಲ, ಪುಷ್ಪ ಜಯರಾಮ್, ಸಾಂಸ್ಕೃತಿಕ ಕಾರ್ಯ ಕ್ರಮ ಸಮಿತಿ ಸಂಚಾಲ ಕರಾಗಿ ದಾಸಪ್ಪ ಮಾಸ್ತರ್, ಸದಸ್ಯರಾಗಿ ಕೃಷ್ಣವೇಣಿ ಟೀಚರ್, ರೇಖಾ, ಶ್ರೀಕುಮಾರಿ ಟೀಚರ್, ಸುಮಿತ್ರ, ಆಹಾರ ಸಮಿತಿ ಸಂಚಾಲಕರಾಗಿ ವರ್ಕಾಡಿ ಪಂ. ಅಧ್ಯಕೆÀ್ಷ ಭಾರತಿ, ಸದಸ್ಯರಾಗಿ ಅಬ್ಬಾಸ್, ಇಸ್ಮಾಯಿಲ್, ಅಶ್ರಫ್ ಸೋಕೆ, ಶೀಲಾವತಿ, ರಫೀಸ್, ಹನೀಫ್ ಚಿಪ್ಪಾರ್ ಆಯ್ಕೆಯಾದರು. ಆಟಿದ ಕೂಟ ಕಾರ್ಯಕ್ರಮ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪೈವಳಿಕೆ ಕುಲಾಲ ಭವನದಲ್ಲಿ ಜರಗಲಿದೆ. ಪೈವಳಿಕೆ ಪಂಚಾಯತ್ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರ್, ಅಕಾಡೆಮಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಿ, ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ಅಬ್ದುಲ್ಲ ಕೆ. ಸ್ವಾಗ ತಿಸಿ, ಅಜಿತ್ ಎಂ.ಸಿ ವಂದಿಸಿದರು.