ಮದ್ಯದಮಲಿನಲ್ಲಿ ತಂದೆಯ ಕೊಲೆಗೈದು ಪುತ್ರ ಪರಾರಿ
ತೃಶೂರು: ಮುಳಯಂಕೂಟ ಲಾಯಿಯಲ್ಲಿ ತಂದೆಯನ್ನು ಪುತ್ರ ಕೊಲೆಗೈದಿದ್ದಾನೆ. ಮೃತದೇಹವನ್ನು ಗೋಣಿಯಲ್ಲಿ ಕಟ್ಟಿ ಸಮೀಪದ ಹಿತ್ತಿಲಲ್ಲಿ ಉಪೇಕ್ಷಿಸಲಾಗಿದೆ. ಕೂಟಾಲ ನಿವಾಸಿ ಮುತ್ತೇಡತ್ ಸುಂದರನ್ ನಾಯರ್ (80)ನನ್ನು ಪುತ್ರ ಸುಮೇಶ್ ಕೊಲೆಗೈದಿದ್ದ ಘಟನೆಯಲ್ಲಿ ಪುತ್ತೂರಿನ ಸಂಬಂಧಿಕರ ಮನೆಯಿಂದ ಸುಮೇಶ್ನನ್ನು ಮಣ್ಣುಟ್ಟಿ ಪೊಲೀಸರು ಸೆರೆ ಹಿಡಿದಿದ್ದಾರೆ. ಈ ವೇಳೆ ಈತ ಮದ್ಯಪಾನ ಗೈದಿದ್ದನೆನ್ನಲಾಗಿದೆ. ತಂದೆಯನ್ನು ಕೊಲೆಗೈದ ಬಳಿಕ ಗೋಣಿಯಲ್ಲಿ ಕಟ್ಟಿ ಸಮೀಪದ ಹಿತ್ತಿಲಲ್ಲಿ ಉಪೇಕ್ಷಿಸಿದ್ದನು. ನಿನ್ನೆ ಸಂಜೆ ಸಂಬಂ ಧಿಕರು ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಕೂಟಾಲ ಹಾಲು ಸೊಸೈಟಿ ಪರಿಸರದಲ್ಲಿ ಮನೆಗೆ ಹೊಂದಿಕೊಂಡಿರುವ ಹಿತ್ತಿಲಲ್ಲಿ ಮೃತದೇಹ ಪತ್ತೆಯಾಗಿತ್ತು. ಇವರ ಮನೆಯಲ್ಲಿ ರಕ್ತದ ಕಲೆ ಪತ್ತೆಯಾಗಿತ್ತು. ಕೊಲೆಯ ಬಳಿಕ ತಂದೆಯ ಆಭರಣಗಳನ್ನು ಕಳವುಗೈದು ಪುತ್ರ ಮನೆಯಿಂದ ಓಡಿ ಹೋಗಿದ್ದನೆಂದು ತಿಳಿದು ಬಂದಿದೆ.