1.800 ಕಿಲೋ ಗಾಂಜಾ ವಶ: ಓರ್ವ ಸೆರೆ; ಸ್ಕೂಟರ್ ವಶ
ಕುಂಬಳೆ: ಸ್ಕೂಟರ್ನಲ್ಲಿ ಸಾಗಿಸುತ್ತಿದ್ದ 1.800 ಕಿಲೋ ಗಾಂಜಾವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.
ಬಂದ್ಯೋಡು ಪೊರಿಕ್ಕೋಡ್ ಎಂಬಲ್ಲಿನ ಮುಹಮ್ಮದ್ ಅಲಿ (51) ಎಂಬಾತನನ್ನು ಕುಂಬಳೆ ಎಕ್ಸೈಸ್ ರೇಂಜ್ ಇನ್ಸ್ಪೆಕ್ಟರ್ ಶ್ರಾವಣ್ ಕೆ.ವಿ ಹಾಗೂ ತಂಡ ಬಂಧಿಸಿದೆ. ಮೊನ್ನೆ ರಾತ್ರಿ ೮.೩೦ಕ್ಕೆ ಶಿರಿಯದಲ್ಲಿ ಕುಂಬಳೆ ಅಬಕಾರಿ ರೇಂಜ್ ಅಧಿಕಾರಿಗಳು, ಕಾಸರಗೋಡು ಅಬಕಾರಿ ಎನ್ಫೋರ್ಸ್ಮೆಂಟ್ ಆಂಡ್ ಆಂಟಿ ನಾರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್ ನಡೆಸಿದ ಕಾರ್ಯಾಚರಣೆ ವೇಳೆ ಸ್ಕೂಟರ್ನಲ್ಲಿ ಗಾಂಜಾ ಸಾಗಾಟ ಪತ್ತೆಹಚ್ಚಲಾಗಿದೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್)ಗಳಾದ ಪ್ರಮೋದ್ ಕುಮಾರ್ ವಿ, ಸಿಕೆವಿ ಸುರೇಶ್, ಪ್ರಿವೆಂಟೀವ್ ಆಫೀಸರ್ಗಳಾದ ಮನಾಸ್ ಕೆ.ವಿ, ಅಜೀಶ್ ಸಿ, ನೌಶಾದ್ ಕೆ, ಸಿಇಒಗಳಾದ ರಾಜೇಶ್ ಪಿ, ಅಖಿಲೇಶ್ ಎಂ.ಎಂ, ಪ್ರಜಿತ್ ಪಿ, ಶಿಜಿತ್ ಎ.ವಿ ಎಂಬಿವರಿದ್ದರು.