ಸಾಫ್ಟ್ ಬೇಸ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಕಿರೀಟ: ತಂಡದ ಶ್ರಾವ್ಯ ಕನಿಯಾಲಳಿಗೆ  ಅಭಿನಂದನೆ

ಬಾಯಾರು: ನೇಪಾಳದಲ್ಲಿ ನಡೆದ ಸೌತ್ ಏಷ್ಯನ್ ಸಾಫ್ಟ್ ಬೇಸ್‌ಬಾಲ್ ಚಾಂಪಿಯನ್ ಶಿಪ್‌ನಲ್ಲಿ ಕಿರೀಟ ಗಳಿಸಿದ ಭಾರತ ತಂಡದ ಶ್ರಾವ್ಯ ಕನಿಯಾಲರನ್ನು ರೆಡ್ ಸ್ಟಾರ್ ಕನಿಯಾರ ಸಂಘದ ಸದಸ್ಯರು ಕಾಸರಗೋಡು ರೈಲ್ವೇ ನಿಲ್ದಾಣದಲ್ಲಿ ಸ್ವಾಗತಿಸಿದರು. ಕನಿಯಾಲದಲ್ಲಿ ರೆಡ್ ಸ್ಟಾರ್ ಕ್ಲಬ್‌ನ ವತಿಯಿಂದ ಅಭಿನಂದನಾ ಸಮಾರಂಭವನ್ನು ಜರಗಿಸಲಾಯಿತು. ಮುಖ್ಯೋ ಪಾಧ್ಯಾಯಿನಿ ಶೋಭಿತಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದರು.

ಶಂಕರನಾರಾಯಣ ಭಟ್ ಮುಖ್ಯ ಅತಿಥಿಯಾಗಿದ್ದರು. ಶಾರದಾಂಬಾ ಶಾಲೆಯ ಮೆನೇಜರ್ ಸಂದಶ್, ಅಧ್ಯಾಪಕರಾದ ಶೋಭಿತ್, ವಾರ್ಡ್ ಪ್ರತಿನಿಧಿ ಮಮತಾ ಶುಭ ಹಾರೈಸಿದರು.ರೆಡ್ ಸ್ಟಾರ್ ಕ್ಲಬ್‌ನ ಅಧ್ಯಕ್ಷ ಲತೀಫ್, ಮುಖ್ಯ ಅತಿಥಿ ಶಂಕರನಾರಾಯಣ ಭಟ್ ಶ್ರಾವ್ಯಾಳನ್ನು ಅಭಿನಂದಿಸಿದರು. ಸದಸ್ಯರಾದ  ಅಬ್ದುಲ್ ಖಾಲಿದ್ ಸ್ವಾಗತಿಸಿ, ರತ್ನಾಕರ ವಂದಿಸಿದರು.

RELATED NEWS

You cannot copy contents of this page