ಸಾರಿಗೆ ಇಲಾಖೆ ಕಾರ್ಯದರ್ಶಿ ನಡೆಸಿದ ಚರ್ಚೆ ವಿಫಲ: ಖಾಸಗಿ ಬಸ್ ಮಾಲಕರು ಮತ್ತೆ ಮುಷ್ಕರದತ್ತ
ತಿರುವನಂತಪುರ: ವಿದ್ಯಾರ್ಥಿ ಪ್ರಯಾಣ ದರ ಹೆಚ್ಚಿಸುವ ವಿಷಯದಲ್ಲಿ ನಡೆದ ಚರ್ಚೆ ಪರಾಭವಗೊಂಡ ಹಿನ್ನೆಲೆಯಲ್ಲಿ ಖಾಸಗಿ ಬಸ್ ಮಾಲಕರು ಅನಿರ್ಧಿಷ್ಟಾವಧಿ ಮುಷ್ಕರ ಬಗ್ಗೆ ಆಲೋಚಿಸುತ್ತಿದ್ದಾರೆ. ಓಣಂ ಮುಂಚೆ ಮುಷ್ಕರ ನಡೆಸುವ ಬಗ್ಗೆ ಆಲೋಚಿಸಲಾಗುತ್ತಿದೆ. ರಿಯಾಯಿತಿ ದರ ಹೆಚ್ಚಿಸುವುದನ್ನು ಅಂಗೀಕರಿ ಸುವುದಿಲ್ಲವೆಂದು ವಿದ್ಯಾರ್ಥಿಗಳ ಸಂಘಟನೆಗಳ ನಿಲುವು ಕೈಗೊಂಡಿರು ವುದರಿಂದ ಸಾರಿಗೆ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಚರ್ಚೆ ಪರಾಭವಗೊಂಡಿತು.
ಈ ತಿಂಗಳ 22ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಲು ಬಸ್ ಮಾಲಕರ ಸಂಘಟನೆ ನಿರ್ಧರಿಸಿತ್ತು. ಆದರೆ ವಿದ್ಯಾರ್ಥಿಗಳ ಪ್ರಯಾಣದರ ಹೆಚ್ಚಳ ಕುರಿತು ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವು ದಾಗಿ ಸಾರಿಗೆ ಸಚಿವ ಭರವಸೆ ನೀಡಿ ರುವುದರಿಂದ ಮುಷ್ಕರ ಹಿಂತೆಗೆಯ ಲಾಗಿತ್ತು. ಸಾರಿಗೆ ಇಲಾಖೆ ಕಾರ್ಯದರ್ಶಿ ಪಿ.ಬಿ.ನೂಹ್, ಸಾರಿಗೆ ಆಯುಕ್ತ ಸಿ.ಎಚ್. ನಾಗರಾಜ್ ವಿದ್ಯಾರ್ಥಿ ಸಂಘಟನೆಗಳ ಹಾಗೂ ಬಸ್ ಮಾಲಕರೊಂದಿಗೆ ಚರ್ಚೆ ನಡೆಸಿದ್ದರು.
ವಿದ್ಯಾರ್ಥಿಗಳ ಪ್ರಯಾಣ ದರ ಕನಿಷ್ಠ 5 ರೂಪಾಯಿ ಹಾಗೂ 5 ಕಿಲೋ ಮೀಟರ್ ಬಳಿಕ ಯತಾರ್ಥ ದರದ ಅಧವನ್ನು ನಿಗದಿಪಡಿಸಬೇಕೆಂದು ಬಸ್ ಮಾಲಕರು ಒತ್ತಾಯಿಸುತ್ತಿದ್ದಾರೆ.