ಹೆಚ್ಚುತ್ತಿರುವ ಬೀದಿನಾಯಿಗಳ ಕಾಟ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮರ್ಚೆಂಟ್ಸ್ ಯೂತ್‌ವಿಂಗ್‌ನಿಂದ ಕುಂಬಳೆ ಪಂ. ಅಧ್ಯಕ್ಷೆಗೆ ಮನವಿ
ಕುಂಬಳೆ: ಪೇಟೆಯಲ್ಲಿ ಹಾಗೂ ಕುಂಬಳೆ ಪಂಚಾಯತ್‌ನ ವಿವಿಧ ಪ್ರದೇಶಗಳಲ್ಲಿ ಬೀದಿ ನಾಯಿ ಉಪಟಳ ತೀವ್ರಗೊಂಡಿದೆ. ಸಾವಿರಾರು ಮಕ್ಕಳು ಕಲಿಯುತ್ತಿರುವ ಕುಂಬಳೆ, ಮೊಗ್ರಾಲ್ ಶಾಲಾ ಮೈದಾನ ಬೀದಿನಾಯಿಗಳ ವಿಹಾರ ಕೇಂದ್ರವಾಗಿ ಬದಲಾಗಿದೆ. ಇದರಿಂದಾಗಿ ಮಕ್ಕಳು ಭೀತಿಗೊಂ ಡಿದ್ದಾರೆ. ಸರಕಾರಿ ಕಚೇರಿಗಳು, ಶಾಲೆ, ಮದ್ರಸಾಗಳು ಆರಾಧನಾಲಯಗಳು ಎಂಬೆಡೆಗಳಿಗೆ ತೆರಳುವವರಿಗೆ ಬೀದಿ ನಾಯಿಗಳಿಗೆ ಹೆದರಿ ಸಂಚರಿಸಬೇಕಾದ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು, ಮೃಗ ಸಂರಕ್ಷಣಾ ಇಲಾಖೆ ಜಂಟಿಯಾಗಿ ನಾಯಿಗಳಿಗೆ ಅಭಯ ಕೇಂದ್ರವನ್ನು ಸಿದ್ಧಪಡಿಸಬೇಕು, ಬೀದಿನಾಯಿಗಳನ್ನು ಸೆರೆ ಹಿಡಿಯಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಕುಂಬಳೆ ಮರ್ಚೆಂಟ್ಸ್ ಯೂತ್ ವಿಂಗ್ ಪಂಚಾಯತ್ ಅಧ್ಯಕ್ಷೆಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದೆ.
ಜಿಲ್ಲೆಯ ಸರಕಾರಿ ಸಂಸ್ಥೆಗಳು ಸಹಿತ ಬೀದಿನಾಯಿಗಳ ಉಪಟಳ ತೀವ್ರವಾದ ಕಾರಣ ಸ್ಥಳೀಯರು ಭೀತಿಯಿಂದ ಸಂಚರಿಸಬೇಕಾಗುತ್ತಿದೆ. ಕೆಲವು ಸರಕಾರಿ ಕಚೇರಿಗಳು ನಾಯಿ ಸಾಕಣೆ ಕೇಂದ್ರವಾಗಿ ಬದಲಾಗಿರುವುದಾಗಿಯೂ ಯೂತ್‌ವಿಂಗ್ ಆರೋಪಿಸಿದೆ. ದಿ
ನದಿಂದ ದಿನಕ್ಕೆ ಕುಂಬಳೆ ಪಂ. ವ್ಯಾಪ್ತಿಯಲ್ಲಿ ಬೀದಿನಾಯಿಗಳು ಹೆಚ್ಚಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರನ್ನು ಹಿಂಬಾಲಿಸಿ ಆಕ್ರಮಿಸುತ್ತಿವೆ ಎಂದು ದೂರಲಾಗಿದೆ. ಬೀದಿ ನಾಯಿಗಳ ಆಕ್ರಮಣದಿಂದ ಪಾರಾಗಲು ನಡೆಸುವ ಯತ್ನದ ಮಧ್ಯೆ ವಾಹನಗಳಿಗೆ ಅಪಘಾತ ಸಂಭವಿಸಿ ಗಾಯಗೊಂಡ ಘಟನೆ ಗಳು ಹಲವಾರು ಸಂಭವಿಸಿವೆ. ಈ ರೀತಿಯಾಗಿದ್ದರೂ ಎಬಿಸಿ ಕೇಂದ್ರಗಳನ್ನು ಜಿಲ್ಲೆಯಲ್ಲಿ ಎಲ್ಲಿಯೂ ಇದುವರೆಗೆ ಆರಂಭಿಸದಿರುವುದು ಆಶ್ಚರ್ಯಕರವಾಗಿದೆ ಎಂದು ಯೂತ್‌ವಿಂಗ್ ಅಭಿಪ್ರಾಯಪಟ್ಟಿದೆ.